
ಈ ಬಾರಿಯ ಲೋಕಸಭಾ ಚುನಾವಣೆ ಏಳು ಹಂತಗಳಲ್ಲಿ ನಡೆದಿದ್ದು, ಕೆಲವು ಕ್ಷೇತ್ರಗಳಲ್ಲಿ ನಡೆದ ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿ ಮತದಾನ ಪೂರ್ಣಗೊಂಡಿದೆ. ಜೂನ್ ನಾಲ್ಕರ ನಾಳೆ ಫಲಿತಾಂಶ ಪ್ರಕಟಗೊಳ್ಳಲಿದ್ದು, ಇದಕ್ಕಾಗಿ ಈಗಾಗಲೇ ಸಕಲ ಸಿದ್ಧತೆ ನಡೆದಿದೆ.
ಇದರ ಮಧ್ಯೆ ಕೇಂದ್ರ ಚುನಾವಣಾ ಆಯೋಗವು ಮತ ಎಣಿಕೆಗೂ ಮುನ್ನಾ ದಿನ ಅಂದರೆ ಇಂದು ಮಧ್ಯಾಹ್ನ 12:30 ಕ್ಕೆ ಪತ್ರಿಕಾಗೋಷ್ಠಿ ಕರೆದಿದ್ದು, ಎಲ್ಲರ ಕುತೂಹಲ ಕೆರಳಿಸಿದೆ. ಭಾರತದ ಚುನಾವಣಾ ಇತಿಹಾಸದಲ್ಲಿಯೇ ಚುನಾವಣಾ ಆಯೋಗ, ಮತ ಎಣಿಕೆಗೂ ಮುನ್ನ ಇದೇ ಮೊದಲ ಬಾರಿಗೆ ಪತ್ರಿಕಾಗೋಷ್ಠಿ ನಡೆಸುತ್ತಿದೆ ಎಂದು ಹೇಳಲಾಗಿದೆ.
543 ಲೋಕಸಭಾ ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಮತದಾನ ನಡೆದಿದ್ದು, ಮೊದಲ ಹಂತದ ಮತದಾನ ಏಪ್ರಿಲ್ 19 ಹಾಗೂ ಅಂತಿಮ ಹಂತದ ಮತದಾನ ಜೂನ್ 1ರಂದು ನಡೆದಿತ್ತು. ಮತ ಎಣಿಕೆ ಜೂನ್ 4ರ ನಾಳೆ ಬೆಳಗ್ಗೆ 8:00 ಗಂಟೆಯಿಂದ ಆರಂಭವಾಗಲಿದ್ದು, ಬಹುತೇಕ ಅಂದು ಸಂಜೆಯೊಳಗೆ ಫಲಿತಾಂಶ ಹೊರ ಬೀಳಲಿದೆ.