ಮೇಷ : ಸಣ್ಣ ಸಣ್ಣ ವಿಚಾರಗಳು ನಿಮ್ಮ ಮನಸ್ಸನ್ನು ಕಲುಷಿತ ಮಾಡುವ ಸಾಧ್ಯತೆ ಇದೆ. ಆರ್ಥಿಕವಾಗಿ ಲಾಭ ಇದ್ದರೂ ಸಹ ಖರ್ಚು-ವೆಚ್ಚುಗಳು ಹೆಚ್ಚಾಗಿರಲಿದೆ. ಸರ್ಕಾರಿ ಕೆಲಸಗಳು ಸುಲಭವಾಗಿ ಆಗಲಿದೆ. ಕೈಗೆ ಸಿಕ್ಕ ಅವಕಾಶವನ್ನ ಕಳೆದುಕೊಳ್ಳಬೇಡಿ.
ವೃಷಭ : ಸಾರ್ವಜನಿಕ ಸ್ಥಳದಲ್ಲಿ ಪ್ರಶಂಸೆ ಗಿಟ್ಟಿಸಿಕೊಳ್ಳಲಿದ್ದೀರಿ. ಇದರಿಂದ ನಿಮ್ಮ ನೈತಿಕ ಸ್ಥೈರ್ಯ ಹೆಚ್ಚಾಗಲಿದೆ. ದೀರ್ಘಕಾಲದಿಂದ ಬರಬೇಕಿದ್ದ ಹಣ ಇಂದು ನಿಮ್ಮ ಕೈಸೇರಲಿದೆ. ಕೌಟುಂಬಿಕ ಕಲಹಗಳು ನಿಮ್ಮ ಮನಸ್ಸಿನ ನೆಮ್ಮದಿಯನ್ನ ಕಾಪಾಡಲಿದೆ.
ಮಿಥುನ : ನಿಮ್ಮ ಸಂಬಂಧಿಗಳ ವರ್ತನೆಯಿಂದ ಕಿರಿಕಿರಿಗೊಳ್ಳಲಿದ್ದೀರಿ. ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ. ಆದಷ್ಟು ದೇಹ ದಂಡನೆ ಮಾಡಿ. ಜವಳಿ ಉದ್ಯಮಿಗಳು ಹಾಗೂ ರಾಜಕೀಯ ರಂಗದವರಿಗೆ ಇದು ಉತ್ತಮ ದಿನವಾಗಿದೆ. ಖರ್ಚು- ವೆಚ್ಚದ ವಿಚಾರದಲ್ಲಿ ಎಚ್ಚರಿಕೆ ಇರಲಿ.
ಕಟಕ : ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಮಾತನ್ನ ನೆನಪಿನಲ್ಲಿಡಿ. ನಿಮ್ಮ ಪ್ರೇಮದ ವಿಚಾರ ಮನೆಯವರಿಗೆ ತಿಳಿದು ದೊಡ್ಡ ಗಲಾಟೆಯೇ ಆಗುವ ಸಾಧ್ಯತೆ ಇದೆ. ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ.
ಸಿಂಹ: ಕಚೇರಿಯಲ್ಲಿ ಹೆಚ್ಚಿನ ಜವಾಬ್ದಾರಿಗಳು ನಿಮ್ಮ ಹೆಗಲೇರಲಿದೆ. ಹಣಕಾಸಿನ ವಿಚಾರದಲ್ಲಿ ಸುಧಾರಣೆ ಕಂಡು ಬರಲಿದೆ. ವೈವಾಹಿಕ ಜೀವನದಲ್ಲಿ ನೆಮ್ಮದಿ ಇರಲಿದೆ. ವಿವಾಹ ಸಂಬಂಧಗಳಿಗೆ ಹುಡುಕಾಟ ನಡೆಸುತ್ತಿರುವವರಿಗೆ ಇಂದು ಶುಭ ಸುದ್ದಿ ಕಾದಿದೆ.
ಕನ್ಯಾ : ಸಂಗಾತಿಗೆ ನೀವು ಸಮಯ ಕೊಡದೇ ಹೋದಲ್ಲಿ ದಾಂಪತ್ಯ ಜೀವನದಲ್ಲಿ ಕಲಹ ಉಂಟಾಗುವ ಸಾಧ್ಯತೆ ಇದೆ. ಕುಟುಂಬ ಸದಸ್ಯರು ನಿಮ್ಮಿಂದ ಸಂತಸದಿಂದ ಇರಲಿದ್ದಾರೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಕೂಡಿ ಬರಲಿದೆ.
ತುಲಾ : ಹೊಸ ವ್ಯವಹಾರದಲ್ಲಿ ಹೂಡಿಕೆ ಮಾಡಲು ಇಂದು ಒಳ್ಳೆಯ ಮುಹೂರ್ತ ಇದೆ. ಪರಂಪರಾಂಗತವಾಗಿ ನಡೆಸಿಕೊಂಡು ಬರುತ್ತಿರುವ ಉದ್ಯಮವನ್ನ ವಿಸ್ತರಿಸುವ ನಿಮ್ಮ ಕನಸು ಕೂಡ ನೆರವೇರಲಿದೆ. ಕುಟುಂಬದಲ್ಲಿ ಉಂಟಾಗುವ ಕಲಹ ನಿಮ್ಮ ನೆಮ್ಮದಿ ಹಾಳು ಮಾಡುವ ಸಾಧ್ಯತೆ ಇದೆ.
ವೃಶ್ಚಿಕ : ಕುಟುಂಬದ ಖರ್ಚಿನಲ್ಲಿ ಏರಿಕೆ ಕಂಡು ಬರೋದ್ರಿಂದ ನೆಮ್ಮದಿ ಹಾಳಾಗಲಿದೆ. ಸಂಗಾತಿಯೊಂದಿಗೆ ಕಲಹ ಉಂಟಾಗುವ ಸಾಧ್ಯತೆ ಇದೆ. ಖುಷಿಯಲ್ಲಿದ್ದಾಗ ಯಾವುದೇ ಪ್ರಮಾಣ ಮಾಡಬಾರದು ಎಂಬ ವಿಚಾರ ತಲೆಯಲ್ಲಿ ಇರಲಿ.
ಧನು : ಯಾವುದೇ ವ್ಯವಹಾರದಲ್ಲಿ ಹೂಡಿಕೆ ಮಾಡುವ ಮುನ್ನ ನೂರು ಬಾರಿ ಯೋಚನೆ ಮಾಡಿ. ಕಚೇರಿ ಕೆಲಸದಲ್ಲಿ ಹಿತಶತ್ರುಗಳ ಕಾಟ ತಪ್ಪಿದ್ದಲ್ಲ. ಮನೆಯಲ್ಲಿ ಧಾರ್ಮಿಕ ಕಾರ್ಯ ನಡೆಯುವ ಬಗ್ಗೆ ಮುನ್ಸೂಚನೆ ಸಿಗಲಿದೆ. ದೂರ ಪ್ರಯಾಣ ಮಾಡಬಹುದಾದ ಅವಕಾಶ ಕೂಡಿ ಬಂದರೂ ಸಹ ಹಣದ ಕೊರತೆ ನಿಮ್ಮನ್ನು ಕಾಡಲಿದೆ.
ಮಕರ : ಬೆಳ್ಳಗಿರೋದೆಲ್ಲವೂ ಹಾಲಲ್ಲ ಎಂಬುದು ತಲೆಯಲ್ಲಿರಲಿ. ಮನಸ್ಸಿನ ತುಮುಲಗಳನ್ನ ಆತ್ಮೀಯರ ಬಳಿ ಹೇಳಿಕೊಳ್ಳಿ. ನಿರಾಳ ಎನಿಸಲಿದೆ. ಭವಿಷ್ಯದ ಬಗ್ಗೆ ಚಿಂತಯೇ ಇಲ್ಲದಂತೆ ಖರ್ಚು ಮಾಡೋದು ಒಳ್ಳೆಯದಲ್ಲ. ಮಕ್ಕಳ ಓದಿನ ವಿಚಾರದಲ್ಲಿ ಜಾಸ್ತಿ ಅಸಡ್ಡೆ ಸಲ್ಲದು.
ಕುಂಭ : ಇಂದು ಯಾವುದೇ ಪ್ರಯಾಣವನ್ನ ಕೈಗೊಳ್ಳಬೇಡಿ. ಜವಳಿ ಉದ್ಯಮಿಗಳಿಗೆ ಲಾಭ ಕಾದಿದೆ. ಕಚೇರಿ ಕೆಲಸದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ ಗಿಟ್ಟಿಸಿಕೊಳ್ಳಲಿದ್ದೀರಿ. ಉದ್ಯೋಗಾಕಾಂಕ್ಷಿಗಳಿಗೆ ನಿರಾಶೆ ತಪ್ಪಿದ್ದಲ್ಲ.
ಮೀನ : ವೃತ್ತಿರಂಗದ ಜೊತೆಯಲ್ಲಿ ವೈಯಕ್ತಿಕ ಜೀವನಕ್ಕೂ ಸಮಾನ ಮಹತ್ವವನ್ನ ನೀಡಿ. ಯಾವುದೇ ಉದ್ಯಮದಲ್ಲಿ ಭಾಗಿಯಾಗುವ ಮುನ್ನ ಅದರ ಬಗ್ಗೆ ಅಧ್ಯಯನ ಮಾಡಿ. ನಿಮ್ಮ ದೈಹಿಕ ನ್ಯೂನ್ಯತೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ.