ನಿನ್ನೆ ನಡೆದ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ನಾಲ್ಕನೇ t20 ಪಂದ್ಯದಲ್ಲಿ ಭಾರತ ತಂಡ ಒಂಬತ್ತು ವಿಕೆಟ್ಗಳ ಭರ್ಜರಿ ಜಯಸಾಧಿಸಿದ್ದು, ಅಂತಿಮ ಪಂದ್ಯಕ್ಕೆ ಸಜ್ಜಾಗುತ್ತಿದೆ.
ಎರಡು ತಂಡಗಳಿಗೂ ಇಂದು ಬಹು ಮುಖ್ಯವಾದ ಪಂದ್ಯವಾಗಿದೆ. ನಿನ್ನೆಯ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ತಮ್ಮ ಮೊದಲ ಅರ್ಧಶತಕ ಸಿಡಿಸುವ ಮೂಲಕ ಸಂಭ್ರಮಿಸಿದ್ದಾರೆ.
ಶುಭಮನ್ ಗಿಲ್ ಹಾಗೂ ಯಶಸ್ವಿ ಜೈಸ್ವಾಲ್ 165 ರನ್ ಗಳ ಜೊತೆಯಾಟ ಮಾಡುವ ಮೂಲಕ ವೆಸ್ಟ್ ಇಂಡಿಸ್ ಬೌಲರ್ಗಳ ಬೆವರಿಳಿಸಿದ್ದಾರೆ. ಇದರೊಂದಿಗೆ ಹಿಟ್ ಮ್ಯಾನ್ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಮಾಡಿದ್ದ 160 ರನ್ ಪಾರ್ಟ್ನರ್ಶಿಪ್ ಅನ್ನು ಹಿಂದಿಕ್ಕಿದ್ದಾರೆ.
ನಿನ್ನೆ ಗಯಾನದಲ್ಲಿ ಭಾರತದ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರಿದ್ದು, ಇಂದು ಅಂತಿಮ ಪಂದ್ಯಕ್ಕೆ ಹೆಚ್ಚು ಜನ ಸೇರುವ ಸಾಧ್ಯತೆ ಇದೆ. ಈ ಪಂದ್ಯಕ್ಕಾಗಿ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.