
ಇಂದು ವಿಶ್ವಕಪ್ನ 25ನೇ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಇಂಗ್ಲೆಂಡ್ ಸೆಣಸಾಡಲಿದ್ದು, ಎರಡು ತಂಡಕ್ಕೂ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಭಾರತ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಪಾಯಿಂಟ್ ಟೇಬಲ್ನ ಟಾಪರ್ ಆಗಿದ್ದು, ಇನ್ನುಳಿದ ತಂಡಗಳು ಸೆಮಿ ಫೈನಲ್ ಪ್ರವೇಶಿಸಲು ಜಿದ್ದಾಜಿದ್ದಿ ಹೋರಾಟ ನಡೆಸುತ್ತಿವೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ರನ್ ಹೊಳೆ ಹರಿಸಲು ಸಜ್ಜಾಗಿದ್ದಾರೆ. ಈ ಬಾರಿಯ ವಿಶ್ವಕಪ್ ನ ಪಾಯಿಂಟ್ ಟೇಬಲ್ ಅಲ್ಲಿ ಏಳು ಹಾಗೂ ಎಂಟನೇ ಸ್ಥಾನದಲ್ಲಿರುವ ಶ್ರೀಲಂಕಾ ಇಂಗ್ಲೆಂಡ್ ತಂಡಕ್ಕೆ ಇದು ತುಂಬಾ ಮುಖ್ಯವಾದ ಪಂದ್ಯವಾಗಿದೆ.
ದೊಡ್ಡ ಅಂತರದಿಂದ ಜಯ ಕಂಡ ತಂಡ ಐದನೇ ಸ್ಥಾನಕ್ಕೇರುವ ಸಾಧ್ಯತೆಯಿದ್ದು, ಸೆಮಿ ಫೈನಲ್ ಕನಸನ್ನು ಯಾವ ತಂಡ ಭದ್ರಪಡಿಸಿಕೊಳ್ಳುತ್ತದೆ ಕಾದುನೋಡಬೇಕಾಗಿದೆ.