
ಇಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗಲಿವೆ. 400 ರನ್ ಗಳ ದೊಡ್ಡ ಮೊತ್ತವನ್ನು ನೀಡುವ ಮೂಲಕ ಎದುರಾಳಿಗಳಿಗೆ ನಡುಕ ಹುಟ್ಟಿಸುತ್ತಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಬಾಂಗ್ಲಾದೇಶ ಯಾವ ರೀತಿ ಉತ್ತರ ನೀಡಲಿದೆ ಎಂಬುದನ್ನು ಇಂದು ಕಾದು ನೋಡಬೇಕಾಗಿದೆ. ವಾಂಖೆಡೆ ಕ್ರೀಡಾಂಗಣ ಬ್ಯಾಟಿಂಗ್ ಗೆ ಹೆಸರುವಾಸಿಯಾಗಿದ್ದು ದಕ್ಷಿಣ ಆಫ್ರಿಕಾ ಮತ್ತೊಂದು ದೊಡ್ಡ ಮೊತ್ತ ಬಾರಿಸುವ ನಿರೀಕ್ಷೆಯಲ್ಲಿದೆ.
ಈ ಬಾರಿಯ ವಿಶ್ವ ಕಪ್ ನಲ್ಲಿ ಬಲಿಷ್ಠ ತಂಡಗಳನ್ನು ಸದೆ ಬಡಿಯುವ ಮೂಲಕ ಸಣ್ಣ ತಂಡಗಳು ಪ್ರೇಕ್ಷಕರ ಗಮನ ಸೆಳೆಯುತ್ತಿವೆ. ಈಗಾಗಲೇ ಆಫ್ಘಾನಿಸ್ತಾನ ತಂಡ ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡದ ಎದುರು ಭರ್ಜರಿ ಜಯ ಸಾಧಿಸಿದರೆ ನೆದರ್ಲ್ಯಾಂಡ್ ತಂಡವು ಬಲಿಷ್ಠ ದಕ್ಷಿಣ ಆಫ್ರಿಕಾದ ತಂಡದೊಂದಿಗೆ ಗೆಲುವು ಕಂಡಿದೆ. ಈ ವಿಶ್ವಕಪ್ ನಲ್ಲಿ ಎಲ್ಲ ರೀತಿಯ ದಾಖಲೆಗಳನ್ನು ನೋಡಬಹುದಾಗಿದೆ.