ಮೊನ್ನೆ ನಡೆದ ನ್ಯೂಜಿಲ್ಯಾಂಡ್ ಹಾಗೂ ಯುಎಇ ನಡುವಣ ಮೊದಲನೇ ಟಿ20 ಪಂದ್ಯದಲ್ಲಿ ಟಿಮ್ ಸೌತಿ ನಾಯಕತ್ವದ ನ್ಯೂಜಿಲೆಂಡ್ ತಂಡ 19 ರನ್ ಗಳಿಂದ ಭರ್ಜರಿ ಜಯ ಸಾಧಿಸಿದ್ದು, ಇಂದು ದುಬೈನಲ್ಲಿ ನಡೆಯಲಿರುವ ಎರಡನೇ ಟಿ20 ಪಂದ್ಯಕ್ಕೆ ಸಜ್ಜಾಗಿದೆ.
ಸಣ್ಣ ತಂಡಗಳು ಬಲಿಷ್ಠ ತಂಡಗಳನ್ನು ಬಗ್ಗು ಬಡಿದಿರುವುದನ್ನು ನಾವು ನೋಡಿದ್ದೇವೆ, ಯುಎಇ ತಂಡದಲ್ಲೂ ಸಾಕಷ್ಟು ಆಲ್ ರೌಂಡರ್ಗಳಿದ್ದು ಗೆಲ್ಲುವ ಉತ್ಸಾಹದಲ್ಲಿದೆ.
ಐಸಿಸಿ ಟಿ20 ರಾಂಕಿನಲ್ಲಿ 16ನೇ ಸ್ಥಾನದಲ್ಲಿರುವ ಯುಎಇ ತಂಡ ಮೇಲ್ಬರಲು ಇದೊಂದು ಉತ್ತಮ ಅವಕಾಶವಾಗಿದೆ. ಕಳೆದ ಪಂದ್ಯದಲ್ಲಿ ಕೇವಲ 19 ರನ್ ಗಳ ಅಂತರದಿಂದ ಯು ಎ ಇ ಸೋಲನುಭವಿಸಿದ್ದು ಇಂದು ಗೆಲ್ಲುವ ಆತ್ಮವಿಶ್ವಾಸದಲ್ಲಿದೆ.