
ಐಪಿಎಲ್ ನ ಸೇಡಿನ ಪಂದ್ಯಗಳು ಭರ್ಜರಿ ಮನರಂಜನೆ ನೀಡುತ್ತಿದ್ದು, ನಿನ್ನೆ ಗುಜರಾತ್ ಟೈಟನ್ಸ್ ತನ್ನ ಕಳೆದ ಪಂದ್ಯದ ಸೇಡನ್ನು ತೀರಿಸಿಕೊಳ್ಳದೆ ಆರ್ಸಿಬಿ ಎದುರು ಮತ್ತೊಮ್ಮೆ ಸೋಲಿಗೆ ಶರಣಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬ್ಯಾಕ್ ಟು ಬ್ಯಾಕ್ ಜಯಬೇರಿಯಾಗುವ ಮೂಲಕ ತನ್ನ ಅಭಿಮಾನಿಗಳಲ್ಲಿ ಸಂತಸ ತಂದಿದೆ.
ಇಂದು ರಿವೇಂಜ್ ವೀಕ್ ನ ಮತ್ತೊಂದು ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗುತ್ತಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಕಳೆದ ಪಂದ್ಯದ ಸೇಡನ್ನು ತೀರಿಸಿಕೊಳ್ಳುತ್ತಾ ಕಾದು ನೋಡಬೇಕಾಗಿದೆ. ಎರಡು ತಂಡಗಳಿಗೂ ಇದು ಬಹು ಮುಖ್ಯವಾದ ಪಂದ್ಯವಾಗಿದ್ದು, ಈ ರೋಮಾಂಚನಕಾರಿ ಪಂದ್ಯವನ್ನು ವೀಕ್ಷಿಸಲು ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ.