
ಇಂದು ಮಹಾರಾಜ ಟ್ರೋಫಿಯ ಇಪ್ಪತ್ತನೇ ಪಂದ್ಯದಲ್ಲಿ ಕರುಣ್ ನಾಯರ್ ನಾಯಕತ್ವದ ಮೈಸೂರು ವಾರಿಯರ್ಸ್ ಹಾಗೂ ಶ್ರೇಯಸ್ ಗೋಪಾಲ್ ಸಾರಥ್ಯದ ಶಿವಮೊಗ್ಗ ಲಯನ್ಸ್ ಮುಖಾಮುಖಿಯಾಗಲಿವೆ.
ಮಹಾರಾಜ ಟ್ರೋಫಿಯ ಅಂಕಪಟ್ಟಿಯಲ್ಲಿ ಮೈಸೂರು ವಾರಿಯರ್ಸ್ ಎರಡನೇ ಸ್ಥಾನದಲ್ಲಿದ್ದು, ಶಿವಮೊಗ್ಗ ಲಯನ್ಸ್ ಐದನೇ ಸ್ಥಾನ ಕಾಯ್ದುಕೊಂಡಿದೆ.
ಮಹಾರಾಜ ಟ್ರೋಫಿ ಇನ್ನೇನು ಕೊನೆ ಹಂತಕ್ಕೆ ತಲುಪಿದ್ದು, ಸೆಮಿ ಫೈನಲ್ ಗೆ ಲಗ್ಗೆ ಇಡಲು ಎಲ್ಲಾ ತಂಡಗಳು ಹೋರಾಟ ನಡೆಸುತ್ತಿವೆ. ಬೆಂಗಳೂರು ಬ್ಲಾಸ್ಟರ್ಸ್ ಸತತ ಆರು ಪಂದ್ಯಗಳನ್ನು ಸೋತಿದ್ದು, ಸೆಮಿ ಫೈನಲ್ ಗೆ ಬರುವ ಸಾಧ್ಯತೆ ಕಡಿಮೆ ಇದೆ.
ಇಂದು ನಡೆಯಲಿರುವ ಮೈಸೂರು ವಾರಿಯರ್ಸ್ ಮತ್ತು ಶಿವಮೊಗ್ಗ ಲಯನ್ಸ್ ಪಂದ್ಯಕ್ಕಾಗಿ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.