![](https://kannadadunia.com/wp-content/uploads/2023/10/8ca754e4-27fd-4ec5-a2af-1d1f2a8d79cb-1024x758.jpg)
ಶಾಹುರಾಜ ಶಿಂದೆ ನಿರ್ದೇಶನದ ಸಚಿನ್ ಧನ್ಪಾಲ್ ಅಭಿನಯದ ಬ್ಲಾಕ್ ಬಸ್ಟರ್ ಸಿನಿಮಾ ‘ಚಾಂಪಿಯನ್’ ಕಳೆದ ವರ್ಷ ಅಕ್ಟೋಬರ್ 14ರಂದು ತೆರೆಕಂಡಿತ್ತು. ಇಂದಿಗೆ ಒಂದು ವರ್ಷಗಳಾಗಿದ್ದು, ನಟ ಸಚಿನ್ ಧನ್ಪಾಲ್ ಈ ಸಂತಸವನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ.
ಶಿವಂ ಪ್ರೊಡಕ್ಷನ್ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದ ಈ ಚಿತ್ರದಲ್ಲಿ ಸಚಿನ್ ದನ್ಪಾಲ್ ಜೊತೆ ಅದಿತಿ ಪ್ರಭುದೇವ ನಾಯಕಿಯಾಗಿ ಅಭಿನಯಿಸಿದ್ದು, ಡೈನಮಿಕ್ ಸ್ಟಾರ್ ದೇವರಾಜ್, ಚಿಕ್ಕಣ್ಣ ಸೇರಿದಂತೆ ಮೊದಲಾದ ಕಲಾವಿದರು ಬಣ್ಣ ಹಚ್ಚಿದ್ದಾರೆ. ಸರವಣನ್ ನಟರಾಜ ಛಾಯಾಗ್ರಹಣವಿದ್ದು, ವಿಕ್ಕಿ ಸಂಕಲನವಿದೆ. ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
![](https://kannadadunia.com/wp-content/uploads/2023/10/2858772a-6de9-4de8-87d7-13d626e0c236-400x596.jpg)