![India vs Bangladesh: Kuldeep Yadav added to squad for third ODI; uncertainty over Rohit Sharma's availability for Test series | Cricket News - Times of India](https://static.toiimg.com/thumb/msid-96104107,width-1280,resizemode-4/96104107.jpg)
ಭಾರತ ಕ್ರಿಕೆಟ್ ತಂಡದ ಅನುಭವಿ ಸ್ಪಿನ್ನರ್ ಕುಲದೀಪ್ ಯಾದವ್ ಅಂತರಾಷ್ಟ್ರೀಯ ಟಿ 20 ಕ್ರಿಕೆಟ್ ನಲ್ಲಿ ಇದುವರೆಗೂ 47 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇಂದು ನಡೆಯಲಿರುವ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಎರಡನೇ ಟಿ ಟ್ವೆಂಟಿ ಪಂದ್ಯದಲ್ಲಿ ಮೂರು ವಿಕೆಟ್ಗಳನ್ನು ಪಡೆದುಕೊಂಡರೆ 50 ವಿಕೆಟ್ಗಳ ಗಡಿ ಮುಟ್ಟಲಿದ್ದಾರೆ.
ಕುಲದೀಪ್ ಯಾದವ್ ಅಂತರಾಷ್ಟ್ರೀಯ ಟಿ 20 ಕ್ರಿಕೆಟ್ನಲ್ಲಿ 29 ಪಂದ್ಯಗಳನ್ನಾಡಿದ್ದು, 47 ವಿಕೆಟ್ಗಳನ್ನು ಪಡೆದುಕೊಂಡಿದ್ದಾರೆ. ತಮ್ಮ ಲೆಫ್ಟ್ ಆರ್ಮ್ ಚೈನಾ ಮ್ಯಾನ್ ಬೌಲಿಂಗ್ ಶೈಲಿಯಿಂದಲೇ ಬ್ಯಾಟ್ಸ್ ಮ್ಯಾನ್ ಗಳಿಗೆ ನಡುಕ ಹುಟ್ಟಿಸುತ್ತಾರೆ.
ಅಂತರಾಷ್ಟ್ರೀಯ ಕ್ರಿಕೆಟ್ ಸೇರಿದಂತೆ ಐಪಿಎಲ್ ನಲ್ಲೂ ಸಾಕಷ್ಟು ಹೆಸರು ಮಾಡಿರುವ ಕುಲದೀಪ್ ಯಾದವ್ ಗೆ ಏಕದಿನ ವಿಶ್ವಕಪ್ ನಲ್ಲಿ ಅವಕಾಶ ಸಿಗಲಿದೆಯಾ ಕಾದು ನೋಡಬೇಕಾಗಿದೆ.