ಬೆಂಗಳೂರು : ದೇಶದಲ್ಲಿಯೇ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯ ಕರ್ನಾಟಕವಾಗಿದೆ. ಇಂದು ಎಲ್ಲೆಡೆ ‘ವಿಶ್ವ ಆನೆ ದಿನ’ ಆಚರಣೆಯನ್ನು ಆಚರಿಸಲಾಗುತ್ತಿದೆ.ಮಾನವಸ್ನೇಹಿ ಗಜರಾಜನ ಸಂರಕ್ಷಣೆ ಹಾಗೂ ಅವುಗಳ ಆವಾಸಸ್ಥಾನಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ.
ಇತಿಹಾಸ ಮತ್ತು ಮಹತ್ವ ತಿಳಿಯಿರಿ
ವಿಶ್ವದಾದ್ಯಂತ ಪ್ರತಿವರ್ಷ ಆಗಸ್ಟ್ 12ರಂದು ಆನೆಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವಿಶ್ವ ಆನೆಗಳ ದಿನಾಚರಣೆ ಮೊದಲು ಪ್ರಾರಂಭವಾಗಿದ್ದು 2012ರ ಆಗಸ್ಟ್ 12ರಂದು.
ವಿಶ್ವ ಆನೆ ದಿನವನ್ನು ಆಗಸ್ಟ್ 12 ರಂದು ಜಾಗತಿಕವಾಗಿ ಆಚರಿಸಲಾಗುತ್ತದೆ. ಥೈಲ್ಯಾಂಡ್ನ ಆನೆ ಮರುಪರಿಚಯ ಪ್ರತಿಷ್ಠಾನ ಮತ್ತು ಕೆನಡಾದ ಚಲನಚಿತ್ರ ನಿರ್ಮಾಪಕ ಪೆಟ್ರಿಸಿಯಾ ಸಿಮ್ಸ್ ಅವರು 2011ರಲ್ಲಿ ವಿಶ್ವ ಆನೆ ದಿನವನ್ನು ಪ್ರಾರಂಭಿಸಿದರು. ಇದನ್ನು ಆಗಸ್ಟ್ 12, 2012 ರಂದು ಮೊದಲ ಬಾರಿಗೆ ಆಚರಿಸಲಾಯಿತು.
ಇತ್ತೀಚಿನ ವರ್ಷಗಳಲ್ಲಿ ಮಾನವ-ಆನೆ ಸಂಘರ್ಷದ ಘಟನೆಗಳು ಹೆಚ್ಚು ಪ್ರಮಾಣದಲ್ಲಿ ನಡೆಯುತ್ತಿದ್ದು, ಇದು ಆತಂಕಕಾರಿಯಾದ ಸಂಗತಿಯಾಗಿದೆ.ವಿಶ್ವ ಆನೆ ದಿನದ ಉದ್ದೇಶವು ಆನೆಗಳನ್ನು ರಕ್ಷಿಸುವುದು ಮತ್ತು ಅವುಗಳ ಆವಾಸಸ್ಥಾನವಾದ ಕಾಡುಗಳನ್ನು ರಕ್ಷಿಸುವುದಾಗಿದೆ. ಇದರೊಂದಿಗೆ ಆನೆಗಳ ಸಂರಕ್ಷಣಾ ಕ್ರಮಗಳು, ಪುನರ್ವಸತಿ, ಅವುಗಳ ಉತ್ತಮ ಆರೋಗ್ಯದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮತ್ತು ಆನೆಗಳ ಅಕ್ರಮ ಸಾಗಣೆಯನ್ನು ತಡೆಯುವುದು ಈ ದಿನದ ಆಚರಣೆಯ ಮುಖ್ಯ ಉದ್ದೇಶವಾಗಿದೆ.