alex Certify BIG NEWS : ಇಂದು ‘ವಿಶ್ವ ಕ್ಯಾನ್ಸರ್’ ದಿನ : ಮಾರಣಾಂತಿಕ ಕಾಯಿಲೆಯ ಲಕ್ಷಣ, ಮುನ್ನೆಚ್ಚರಿಕೆ ಕ್ರಮ ತಿಳಿಯಿರಿ |World Cancer Day 2025 | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಇಂದು ‘ವಿಶ್ವ ಕ್ಯಾನ್ಸರ್’ ದಿನ : ಮಾರಣಾಂತಿಕ ಕಾಯಿಲೆಯ ಲಕ್ಷಣ, ಮುನ್ನೆಚ್ಚರಿಕೆ ಕ್ರಮ ತಿಳಿಯಿರಿ |World Cancer Day 2025

ಫೆಬ್ರವರಿ 4 ಇಂದು ‘ವಿಶ್ವ ಕ್ಯಾನ್ಸರ್’ ದಿನ ಆಚರಣೆ ಮಾಡಲಾಗುತ್ತಿದೆ. ಕ್ಯಾನ್ಸರ್ ಮಹಾಮಾರಿಯು ಹಲವರ ಜೀವ ಮತ್ತು ಜೀವನವನ್ನೇ ಕಸಿದುಕೊಂಡಿದೆ. ವಿಶ್ವ ಕ್ಯಾನ್ಸರ್ ದಿನವನ್ನು ಪ್ರತಿ ಫೆಬ್ರವರಿ 4 ರಂದು ಆಚರಿಸಲಾಗುತ್ತದೆ.

ಇದು ಯೂನಿಯನ್ ಫಾರ್ ಇಂಟರ್ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ (UICC) ನೇತೃತ್ವದ ಜಾಗತಿಕ ಉಪಕ್ರಮವಾಗಿದೆ . ಪ್ರಪಂಚದಾದ್ಯಂತ ಜಾಗೃತಿ ಮೂಡಿಸುವ ಮೂಲಕ, ಜ್ಞಾನವನ್ನು ಹಂಚಿಕೊಳ್ಳುವ ಮೂಲಕ ಜಾಗೃತಿ ಮೂಡಿಸಲಾಗುತ್ತದೆ.

ಕ್ಯಾನ್ಸರ್ ಒಂದು ರೋಗವಾಗಿದ್ದು, ದೇಹದ ಕೆಲವು ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆಯಿಂದಾಗಿ ಅದರ ರಚನೆಯು ಸಂಭವಿಸುತ್ತದೆ. ಈ ಅನಿಯಂತ್ರಿತ ಬೆಳವಣಿಗೆಯೊಂದಿಗೆ, ಜೀವಕೋಶಗಳು ದೇಹದ ವಿವಿಧ ಭಾಗಗಳಿಗೆ ಬೆಳೆಯಬಹುದು.

ಸಾಮಾನ್ಯ ಜೀವಕೋಶಗಳು ಗೆಡ್ಡೆಯ ಕೋಶಗಳಾಗಿ ರೂಪಾಂತರಗೊಳ್ಳುವುದರಿಂದ ಕ್ಯಾನ್ಸರ್ ರೋಗವು ಉದ್ಭವಿಸುತ್ತದೆ. ಇದಲ್ಲದೆ, ಈ ಪ್ರಕ್ರಿಯೆಯು ಬಹು-ಹಂತದ ಪ್ರಕ್ರಿಯೆಯಲ್ಲಿ ನಡೆಯುತ್ತದೆ.

ಲಕ್ಷಣಗಳು

ಶ್ವಾಸಕೋಶದ ಕ್ಯಾನ್ಸರ್

ಕೆಲವರಿಗೆ ನಿರಂತರವಾಗಿ ಕೆಮ್ಮಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಯಾವುದೇ ಔಷಧಿ ಗಳನ್ನು ತೆಗೆದುಕೊಂಡರೂ ಕೂಡ ಕೆಮ್ಮು ಕಡಿಮೆಯಾಗದೇ ಇರುವುದು, ಅಷ್ಟೇ ಅಲ್ಲದೆ ಕೆಮ್ಮುವಾಗ ಕಫ ಹಾಗೂ ರಕ್ತ ಬರುತ್ತಿದ್ದರೆ, ಇದು ಶ್ವಾಸಕೋಶದ ಕ್ಯಾನ್ಸರ್ ಆಗಿರುತ್ತದೆ. ಬೀಡಿ, ಸಿಗರೇಟ್ ಸೇವಿಸುವುದರಿಂದ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆಯಿದೆ.

ಸ್ತನ ಕ್ಯಾನ್ಸರ್

ಮಹಿಳೆಯರನ್ನೇ ಹೆಚ್ಚು ಟಾರ್ಗೆಟ್ ಮಾಡುತ್ತಿರುವ ಕಾಯಿಲೆಗಳಲ್ಲಿ ಸ್ತನ ಕ್ಯಾನ್ಸರ್ ಕೂಡ ಒಂದು ಆಗಿದೆ. ಸ್ತನದ ಆಕಾರದಲ್ಲಿ ಇದ್ದಕ್ಕಿದಂತೆ ಬದಲಾವಣೆ ಆಗುವುದು, ಸ್ತನದ ತೊಟ್ಟಿನಲ್ಲಿ ಸೆಳೆತ ಅಥವಾ ನೋವು ಕಾಣಿಸಿಕೊಳ್ಳುವುದು ಇದರ ಲಕ್ಷಣಗಾಗಿದೆ.

ದೇಹದ ತೂಕ ಕಡಿಮೆ ಆಗುತ್ತಾ ಬರುವುದು ಕೂಡ ಕ್ಯಾನ್ಸರ್ ಕಾಯಿಲೆಯ ಮೊದಲ ಲಕ್ಷಣಗಳಲ್ಲಿ ಒಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಜಾಗೃತಿ ವಹಿಸಿ. ಇಂತಹ ಲಕ್ಷಣಗಳು ಕಂಡು ಬಂದರೆ ಕೂಡಲೇ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಕೊಳ್ಳಿ.

ಪುರುಷರಲ್ಲಿ ಮೂತ್ರ ದಲ್ಲಿ ಹಾಗೂ ವೀರ್ಯದಲ್ಲಿ ರಕ್ತ ಕಾಣಿಸಿಕೊಳ್ಳುವುದು, ತೊಡೆಗಳ ಭಾಗದಲ್ಲಿ ನೋವು ಕಾಣಿಸುವುದು, ವೀರ್ಯವನ್ನು ಹೊರ ಹಾಕು ವಲ್ಲಿ ತುಂಬಾ ಕಷ್ಟವಾಗುವುದು ಕ್ಯಾನ್ಸರ್ ನ ಲಕ್ಷಣಗಳಾಗಿದೆ.

ಇನ್ನಿತರ ಲಕ್ಷಣಗಳು

* ಚರ್ಮದ ಬದಲಾವಣೆಗಳು, ಉದಾಹರಣೆಗೆ ಕೆಂಪಾಗುವುದು ಅಥವಾ ಕಪ್ಪಾಗುವುದು ಅಥವಾ ಚರ್ಮದ ಹಳದಿ ಬಣ್ಣ

*ಕರುಳಿನ ಸಾಮಾನ್ಯ ಕಾರ್ಯನಿರ್ವಹಣೆಯಲ್ಲಿ ಬದಲಾವಣೆ
*ಉಸಿರಾಟದಲ್ಲಿ ತೊಂದರೆ
*ನಿರಂತರ ಜ್ವರಗಳು, ರಾತ್ರಿ ಬೆವರುವಿಕೆ
*ನಿರಂತರ ಕೆಮ್ಮು
*ಆಹಾರವನ್ನು ನುಂಗಲು ತೊಂದರೆ

ಕ್ಯಾನ್ಸರ್ ತಡೆಗಟ್ಟುವುದು ಹೇಗೆ..?

*ನೀವು ಧೂಮಪಾನ ಮಾಡುತ್ತಿದ್ದರೆ ತಕ್ಷಣ ಧೂಮಪಾನವನ್ನು ನಿಲ್ಲಿಸಬೇಕು. ತಜ್ಞರ ಪ್ರಕಾರ, ಶ್ವಾಸಕೋಶದ ಕ್ಯಾನ್ಸರ್ ಮಾತ್ರವಲ್ಲದೆ ಹಲವಾರು ರೀತಿಯ ಕ್ಯಾನ್ಸರ್ಗಳಿಗೆ ಧೂಮಪಾನ ಕಾರಣವಾಗುತ್ತದೆ.

*ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸಿ

*ವಾರದ ಹೆಚ್ಚಿನ ದಿನಗಳಲ್ಲಿ ದಿನಕ್ಕೆ ಕನಿಷ್ಠ ಅರ್ಧ ಗಂಟೆಯಾದರೂ ವರ್ಕ್ ಔಟ್ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ನಿರಂತರ ವ್ಯಾಯಾಮ, ವಾಕಿಂಗ್ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.

*ನೀವು ಆಲ್ಕೋಹಾಲ್ ಸೇವನೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಅದನ್ನು ಸಂಪೂರ್ಣವಾಗಿ ತಪ್ಪಿಸುವುದು ಉತ್ತಮವಾಗಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...