
ಟಿ ಟ್ವೆಂಟಿ ಹಬ್ಬ ಜೋರಾಗೆ ಇದೆ ಭಾರತ ಹಾಗೂ ಅಫ್ಘಾನಿಸ್ತಾನ ಟಿ ಟ್ವೆಂಟಿ ಸರಣಿ ಒಂದು ಕಡೆಯಾದರೆ ಶ್ರೀಲಂಕಾ ಮತ್ತು ಜಿಂಬಾಬ್ವೆ ನಡುವಣ ಟಿ20 ಪಂದ್ಯಗಳು ಕೂಡ ಭರ್ಜರಿ ಮನರಂಜನೆ ನೀಡುತ್ತಿವೆ.
ಮೊನ್ನೆಯಷ್ಟೇ ನಡೆದ ಮೊದಲ ಟಿ ಟ್ವೆಂಟಿ ಪಂದ್ಯದಲ್ಲಿ ಜಿಂಬಾಂಬ್ವೆ ಎದುರು ಮೂರು ವಿಕೆಟ್ ಗಳಿಂದ ರೋಚಕ ಜಯ ಸಾಧಿಸಿರುವ ಶ್ರೀಲಂಕಾ ತಂಡ ಇಂದು ಟಿ ಟ್ವೆಂಟಿ ಸರಣಿಯನ್ನು ತನ್ನದಾಗಿಸಿಕೊಳ್ಳುವ ತವಕದಲ್ಲಿದೆ. ಕೊಲಂಬೋದಲ್ಲಿ ಈ ಪಂದ್ಯ ನಡೆಯಲಿದ್ದು, ಜಿಂಬಾಂಬ್ವೆ ತಂಡಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ಶ್ರೀಲಂಕಾ ತಂಡವನ್ನು ಅವರ ಓಂಗ್ರೌಂಡ್ ನಲ್ಲೇ ಸೋಲಿಸುವ ಮೂಲಕ ಜಿಂಬಾಬ್ವೆ ತಂಡ ಹೊಸ ದಾಖಲೆ ಬರೆಯಲಿದೆಯಾ ಕಾದು ನೋಡಬೇಕಾಗಿದೆ. ಇದಾದ ಬಳಿಕ ಅಂತಿಮ ಟಿ 20 ಪಂದ್ಯ ಜನವರಿ 18ರಂದು ನಡೆಯಲಿದೆ. ಈಗಾಗಲೇ ಏಕದಿನ ಸರಣಿಯನ್ನು ಗೆದ್ದಿರುವ ಶ್ರೀಲಂಕಾ ತಂಡ ಟಿ 20 ಸರಣಿಯನ್ನು ಕೈವಶ ಮಾಡಿಕೊಳ್ಳಲು ಸಜ್ಜಾಗಿದೆ.