
ಮೊದಲ ಟಿ ಟ್ವೆಂಟಿ ಪಂದ್ಯದಲ್ಲಿ 111 ರನ್ ಗಳ ಅಂತರದಿಂದ ಆಸ್ಟ್ರೇಲಿಯಾ ತಂಡ ಭರ್ಜರಿ ಜಯ ಸಾಧಿಸಿತ್ತು. ಇಂದು ಡರ್ಬನ್ ನಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡವಣ ಎರಡನೇ ಟಿ ಟ್ವೆಂಟಿ ನಡೆಯಲಿದೆ.
ದಕ್ಷಿಣ ಆಫ್ರಿಕಾ ತಂಡಕ್ಕೆ ಇಂದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಮೂರು ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಈಗಾಗಲೇ ಒಂದು ಜಯಗಳಿಸಿದ್ದು, ಇಂದು ಸರಣಿ ಕೈವಶ ಮಾಡಿಕೊಳ್ಳುವ ನಿರೀಕ್ಷೆಯಲ್ಲಿದೆ.
ಟಿ20 ಸರಣಿ ಸರಣಿಯ ಬಳಿಕ ಈ ತಂಡಗಳ ನಡುವೆ ನಾಲ್ಕು ಏಕ ದಿನ ಪಂದ್ಯಗಳು ನಡೆಯಲಿದೆ. ವಿಶ್ವ ಕಪ್ ಕೂಡ ಇನ್ನೇನು ಹತ್ತಿರವಿದ್ದು, ಎಲ್ಲ ಅಂತಾರಾಷ್ಟ್ರೀಯ ತಂಡಗಳು ಕೆಲವೇ ದಿನಗಳಲ್ಲಿ ಪ್ಲೇ ಲೆವೆನ್ ಆಟಗಾರರನ್ನು ರಚಿಸಲು ಸಜ್ಜಾಗಿದ್ದಾರೆ.