
ಪರಶುರಾಮ್ ನಿರ್ದೇಶನದ ವಿಜಯ್ ದೇವರಕೊಂಡ ಅಭಿನಯದ ಬಹುನಿರೀಕ್ಷಿತ ‘ದಿ ಫ್ಯಾಮಿಲಿ ಸ್ಟಾರ್’ ಚಿತ್ರ ಇದೇ ಏಪ್ರಿಲ್ 5ಕ್ಕೆ ತೆರೆ ಮೇಲೆ ಬರಲಿದ್ದು, ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಈ ಸಿನಿಮಾ ಪ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮ ಇಂದು ಸಂಜೆ 5:30ಕ್ಕೆ ಹೈದರಾಬಾದ್ ನ ನರಸಿಂಹ ರೆಡ್ಡಿ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಅದ್ದೂರಿಯಾಗಿ ನೆರವೇರಲಿದೆ. ಈ ಕುರಿತು ಚಿತ್ರತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.
ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ಮೃಣಾಲ್ ಠಾಕೂರ್ ಮುಖ್ಯ ಭೂಮಿಕೆಯಲ್ಲಿದ್ದು, ದಿವ್ಯಂಷ ಕೌಶಿಕ್, ಅಜಯ್ ಗೋಶ್, ವಾಸುಕಿ, ರೋಹಿಣಿ, ಅಭಿನಯ, ಜಬರ್ದಸ್ತ್ ರಾಮ್ ಪ್ರಸಾದ್, ಕೋಟ ಜಯರಾಮ್, ಮರಿಸ್ಸಾ ರೋಜ್ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ರಾಜು ಮತ್ತು ಸಿರೀಶ್ ನಿರ್ಮಾಣ ಮಾಡಿದ್ದಾರೆ. ಗೋಪಿ ಸುಂದರ್ ಸಂಗೀತ ಸಂಯೋಜನೆ ನೀಡಿದ್ದು, ಮಾರ್ತಾಡ್ ಕೆ ವೆಂಕಟೇಶ್ ಸಂಕಲನ, ಮೋಹನನ್ ಛಾಯಗ್ರಹಣವಿದೆ.