
ರವಿತೇಜ ಅಭಿನಯದ ‘ಈಗಲ್’ ಸಿನಿಮಾ ಫೆಬ್ರವರಿ 9 ಕ್ಕೆ ಬಿಡುಗಡೆಯಾಗುತ್ತಿದ್ದು, ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರತಂಡ ಇಂದು ಸಂಜೆ 6 ಗಂಟೆಗೆ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದೆ.
ಕಾರ್ತಿಕ್ ನಿರ್ದೇಶನದ ಈ ಸಿನಿಮಾ ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ತೆರೆ ಕಾಣಲಿದ್ದು, ರವಿತೇಜ ಸೇರಿದಂತೆ ಅನುಪಮಾ ಪರಮೇಶ್ವರನ್, ನವದೀಪ್, ಕಾವ್ಯಾ ಥಾಪರ್, ವಿನಯ್ ರೈ, ಅಜಯ್ ಘೋಷ್, ಹಾಗೂ ,ಶ್ರೀನಿವಾಸ ರೆಡ್ಡಿ ತೆರೆ ಹಂಚಿಕೊಂಡಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ನಡಿ ವಿಶ್ವ ಪ್ರಸಾದ್ ಹಾಗೂ ವಿವೇಕ್ ಬಂಡವಾಳ ಹೂಡಿದ್ದಾರೆ. ದಾವ್ಜಂಡ್ ಸಂಗೀತ ಸಂಯೋಜನೆ ನೀಡಿದ್ದಾರೆ. ಇದೊಂದು ಆಕ್ಷನ್ ಥ್ರಿಲ್ಲರ್ ಕಥಾಧಾರಿತ ಸಿನಿಮಾ ಎಂದು ಹೇಳಲಾಗಿದೆ.
