alex Certify ಗಮನಿಸಿ : ‘ಆದಾಯ ತೆರಿಗೆ’ಯ ರಿಟರ್ನ್ಸ್ ಸಲ್ಲಿಕೆಗೆ ಇಂದು ಕೊನೆಯ ದಿನಾಂಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ : ‘ಆದಾಯ ತೆರಿಗೆ’ಯ ರಿಟರ್ನ್ಸ್ ಸಲ್ಲಿಕೆಗೆ ಇಂದು ಕೊನೆಯ ದಿನಾಂಕ

ನವದೆಹಲಿ : 2023-24ನೇ ಸಾಲಿನ ಆದಾಯ ತೆರಿಗೆ ( Income Tax)  ರಿಟರ್ನ್ಸ್ ಫೈಲ್  ಮಾಡಲು   ಇಂದು ಜುಲೈ 31 ಕೊನೆಯ ದಿನಾಂಕವಾಗಿದೆ.

ಹೌದು, 2023-24ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಲು ಇಂದು ಸೋಮ ವಾರ ಕೊನೆ ದಿನವಾಗಿದೆ, ದಿನಾಂಕ ಮುಂದೂ ಡುವುದಿಲ್ಲ ಎಂದು ತೆರಿಗೆ ಇಲಾಖೆ ಸ್ಪಷ್ಟಪಡಿ ಸಿದೆ. ಆದ್ದರಿಂದ ನಾಳೆಯಿಂದ ನೀವು ರಿಟರ್ನ್ ಸಲ್ಲಿಸಿ ದರೆ ದಂಡ ಕಟ್ಟಬೇಕಾಗುತ್ತದೆ.

ರಿಟರ್ನ್ಸ್ ಫೈಲ್ ಮಾಡಲು ಇಂದು ಕೊನೆಯ ದಿನಾಂಕವಾಗಿದ್ದರಿಂದ ನಿನ್ನೆ ಮಧ್ಯಾಹ್ನ 1 ಗಂಟೆಯವರೆಗೆ ಸುಮಾರು 1 ಕೋಟಿ ರಿಟರ್ನ್ಗಳು ಫೈಲ್ ಆಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ಅದೇ ರೀತಿ ಟರ್ನ್ ಸಲ್ಲಿಕೆಗೆ ಜು.31 ಕೊನೆಯ ದಿನ’ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ. ಫೈಲ್ ಮಾಡುವುದು ವಿಳಂವಾದರೆ 5 ಸಾವಿರ ರೂ. ದಂಡ ಪಾವತಿಸಬೇಕು, ಆದಾಯ 25 ಲಕ್ಷ ಮೀರಿದ್ದರೆ ದಂಡದ ಪ್ರಮಾಣ 1 ಸಾವಿರ ರೂ .ನಷ್ಟಿದೆ. ದಂಡಶುಲ್ಕದೊಂದಿಗೆ ಪಾವತಿ ಮಾಡಲು ಡಿ.31 ಕೊನೆಯ ದಿನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಜುಲೈ 31 ರ ಗಡುವಿನೊಳಗೆ ನೀವು ಐಟಿಆರ್ ಸಲ್ಲಿಸದಿದ್ದರೆ ಈ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ
ಗಡುವನ್ನು ತಪ್ಪಿಸಿಕೊಂಡ ತೆರಿಗೆದಾರರು ತಡವಾಗಿ ಐಟಿಆರ್ ಸಲ್ಲಿಸುವ ಆಯ್ಕೆಯನ್ನು ಹೊಂದಿದ್ದಾರೆ. ತಡವಾಗಿ ಐಟಿಆರ್ ಸಲ್ಲಿಸಲು ಕೊನೆಯ ದಿನಾಂಕ 2022-23ರ ಹಣಕಾಸು ವರ್ಷಕ್ಕೆ (ಎವೈ 2023-24) ಡಿಸೆಂಬರ್ 31 ಆಗಿದೆ. ನಿಗದಿತ ದಿನಾಂಕದ ನಂತರ (ಅಂದರೆ ಜುಲೈ 31) ಮತ್ತು ಡಿಸೆಂಬರ್ 31 ರಂದು ಅಥವಾ ಅದಕ್ಕೂ ಮೊದಲು ಐಟಿಆರ್ ಸಲ್ಲಿಸಿದರೆ, ವಿಳಂಬ ಫೈಲಿಂಗ್ ಶುಲ್ಕವನ್ನು ವಿಧಿಸಲಾಗುತ್ತದೆ.

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 234 ಎಫ್ ಪ್ರಕಾರ, ನೀವು ಜುಲೈ 31 ರ ನಿಗದಿತ ದಿನಾಂಕದ ನಂತರ ನಿಮ್ಮ ಐಟಿಆರ್ ಅನ್ನು ಸಲ್ಲಿಸಿದರೆ, ಆದರೆ ಡಿಸೆಂಬರ್ 31, 2023 ರ ಮೊದಲು, ನೀವು ಗರಿಷ್ಠ 5,000 ರೂ.ಗಳ ದಂಡವನ್ನು ಕಟ್ಟಬೇಕಾಗುತ್ತದೆ. ಒಟ್ಟು 5 ಲಕ್ಷ ರೂ.ವರೆಗಿನ ಆದಾಯ ಹೊಂದಿರುವವರು 1,000 ರೂ.ಗಳ ದಂಡವನ್ನು ಪಾವತಿಸಬೇಕಾಗುತ್ತದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...