ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ನಲ್ಲಿ ಮುಖಭಂಗ ಅನುಭವಿಸಿರುವ ಭಾರತೀಯ ಕ್ರಿಕೆಟ್ ತಂಡವು ಇಂದಿನಿಂದ ಏಕದಿನ ಸರಣಿ ಆಡಲಿದೆ.
ಈ ಸರಣಿ ಗೆದ್ದು ಟೆಸ್ಟ್ ನಲ್ಲಿನ ಮುಖಭಂಗಕ್ಕೆ ಸೇಡು ತೀರಿಸಿಕೊಳ್ಳುವ ತವಕ, ಭಾರತ ತಂಡದ್ದಾಗಿದ್ದರೆ, ತಾಯ್ನೆಲದಲ್ಲಿ ಗೆಲುವಿನ ಅಭಿಯಾನ ಮುಂದುವರೆಸಲು ದಕ್ಷಿಣ ಆಫ್ರಿಕಾ ಮುಂದಾಗಿದೆ.
ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಗಾಯದ ಸಮಸ್ಯೆಯಿಂದ ತಂಡದಿಂದ ದೂರ ಉಳಿದಿದಿದ್ದರ ಹಿನ್ನೆಲೆಯಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ನಾಯಕತ್ವದಲ್ಲಿ ತಂಡವು ಕಣಕ್ಕೆ ಇಳಿಯಲಿದೆ.
ಈಗಾಗಲೇ ರಾಹುಲ್ ಸುದ್ದಿಗೋಷ್ಠಿ ನಡೆಸಿ ಕೂಡ ಮಾತನಾಡಿದ್ದಾರೆ. ಮೊದಲ ಏಕದಿನ ಪಂದ್ಯವು ಅಲ್ಲಿಯ ಪಾರ್ಲ್ ನ ಬೋಲ್ಯಾಂಡ್ ಪಾರ್ಕ್ ನಲ್ಲಿ ಭಾರತೀಯ ಕಾಲಮಾನದಂತೆ ಮಧ್ಯಾಹ್ನ 2ಕ್ಕೆ ಆರಂಭವಾಗಲಿದೆ.
ಭಾರತೀಯ ತಂಡದ ಉಪನಾಯಕನಾಗಿ ಜಸ್ ಪ್ರೀತ್ ಬುಮ್ರಾ ಕಾಣಿಸಿಕೊಳ್ಳಲಿದ್ದಾರೆ. ಏಕದಿನ ಪಂದ್ಯದಲ್ಲಿ ಉದಯೋನ್ಮುಖ ಆಟಗಾರ ವೆಂಕಟೇಶ್ ಅಯ್ಯರ್ ಪಾದಾರ್ಪಣೆ ಮಾಡಲಿದ್ದಾರೆ. ಈಗಾಗಲೇ ಅಳೆದು ತೂಗಿ, 11ರ ಬಳಗ ಕಟ್ಟುವಲ್ಲಿ ರಾಹುಲ್ ಚಿಂತನೆ ನಡೆಸಿದ್ದಾರೆ.
BREAKING NEWS: ಕೊರೊನಾ ಸೋಂಕು ಮತ್ತೆ ಸ್ಫೋಟ; ಒಂದೇ ದಿನದಲ್ಲಿ ಏರಿಕೆಯಾದ ಸೋಂಕಿತರ ಸಂಖ್ಯೆ; 24 ಗಂಟೆಯಲ್ಲಿ 441 ಜನ ಮಹಾಮಾರಿಗೆ ಬಲಿ
ಭಾರತ ತಂಡದಲ್ಲಿ ಕೆ.ಎಲ್. ರಾಹುಲ್ (ನಾಯಕ), ಜಸ್‌ಪ್ರೀತ್ ಬುಮ್ರಾ (ಉಪ-ನಾಯಕ), ಶಿಖರ್ ಧವನ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್‌ಕೀಪರ್), ಯುಜ್ವೇಂದ್ರ ಚಹಾಲ್, ಆರ್. ಅಶ್ವಿನ್, ಭುವನೇಶ್ವರ ಕುಮಾರ್, ದೀಪಕ್ ಚಹಾರ್, ಪ್ರಸಿದ್ಧ ಕೃಷ್ಣ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಜಯಂತ್ ಯಾದವ್ ಹಾಗೂ ನವದೀಪ್ ಸೈನಿ ಇದ್ದಾರೆ.