ಮೊನ್ನೆಯಷ್ಟೇ ಭಾರತ ಹಾಗೂ ವೆಸ್ಟ್ ಇಂಡೀಸ್ ಏಕದಿನ ಸರಣಿ ಮುಕ್ತಾಯಗೊಂಡಿದ್ದು, ಭಾರತ ತಂಡ 2-1 ರಿಂದ ಸರಣಿ ಕೈ ವಶಪಡಿಸಿಕೊಂಡಿದೆ.
ಇಂದಿನಿಂದ ಆಗಸ್ಟ್ 13ರವರೆಗೆ 5 ಟಿ ಟ್ವೆಂಟಿ ಪಂದ್ಯಗಳು ನಡೆಯಲಿವೆ. ಟಿ ಟ್ವೆಂಟಿ ರ್ಯಾಂಕಿಂಗ್ ನಲ್ಲಿ ಭಾರತ ತಂಡ ನಂಬರ್ ಒನ್ ಸ್ಥಾನದಲ್ಲಿದ್ದು, ವೆಸ್ಟ್ ಇಂಡೀಸ್ ತಂಡ ಏಳನೇ ಸ್ಥಾನ ಕಾಯ್ದುಕೊಂಡಿದೆ.
ಟಿ ಟ್ವೆಂಟಿ ಸರಣಿಗೆ ಭಾರತ ತಂಡದಲ್ಲಿ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವ ಸಾಧ್ಯತೆ ಇದೆ. ಈ ಸರಣಿಯ ಬಳಿಕ ಭಾರತ ತಂಡ ಅಗಸ್ಟ್ 18 ರಿಂದ ಐರ್ಲೆಂಡ್ ತಂಡದೊಂದಿಗೆ ಮೂರು ಟಿ 20 ಪಂದ್ಯಗಳನಾಡಲಿದ್ದು, ಅಗಸ್ಟ್ 30 ರಿಂದ ಆರಂಭವಾಗಲಿರುವ ಏಷ್ಯಾ ಕಪ್ ಗೆ ಸಿದ್ಧವಾಗಲಿದೆ.