![](https://kannadadunia.com/wp-content/uploads/2023/10/cbecd54d-b7cc-44a7-b32d-dbbc9517caaf.jpg)
2020 ಜೂನ್ 7 ರಂದು ವಿಧಿವಶರಾದ ಪ್ರತಿಭಾವಂತ ನಟ ಚಿರಂಜೀವಿ ಸರ್ಜಾ ಅವರ ಕೊನೆಯ ಸಿನಿಮಾ ‘ರಾಜ ಮಾರ್ತಾಂಡ’ ರಾಜ್ಯದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಅವರ ಅಭಿಮಾನಿಗಳು ಎಲ್ಲೆಡೆ ಸಂಭ್ರಮಿಸುತ್ತಿದ್ದಾರೆ.
ಇಂದು ಅವರ 39ನೇ ಜನ್ಮದಿನವಾಗಿದ್ದು, ಅವರ ಪತ್ನಿ ಮೇಘನಾ ತಮ್ಮ instagram ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದರೆ ನಟ ಚಿರಂಜೀವಿ ಸರ್ಜಾ 2009 ರಲ್ಲಿ ತೆರೆಕಂಡ ‘ವಾಯುಪುತ್ರ’ ಮೂಲಕ ಚಿತ್ರರಂಗ ಪ್ರವೇಶಿಸಿದ ಇವರು ನಂತರ ‘ಗಂಡೆದೆ’, ‘ಚಿರು’, ʼದಂಡಂ ದಶಗುಣಂʼ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸಿದರು. ಅವರ ಕೊನೆಯ ಸಿನಿಮಾ ರಾಜ ಮಾರ್ಥಂಡ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಧೂಳೆಬ್ಬಿಸಿದೆ. ಇಂದು ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಮಾನಿಗಳು ಅವರ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.