
ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಅಂತ್ಯಕ್ರಿಯೆ ನಿನ್ನೆ ಸಂಜೆ ತೋಟದ ಮನೆಯಲ್ಲಿ ನೇರವೇರಿದ್ದು, ಇಂದು ಹಾಲು ತುಪ್ಪು ಬಿಡುವ ಕಾರ್ಯ ನಡೆಯಲಿದೆ.
ಲೀಲಾವತಿ ನಿಧನರಾಗಿ ಮೂರು ದಿನಗಳಾಗಿರುವ ಹಿನ್ನೆಲೆಯಲ್ಲಿ ಇಂದು ಲೀಲಾವತಿ ಅವರ ಕುಟುಂಬ ವರ್ಗ ಅವರ ಸಮಾಧಿಗೆ ಹಾಲು ತುಪ್ಪ ಬಿಡಲಿದ್ದಾರೆ.
ವಿನೋದ್ ರಾಜ್, ಅವರ ಪತ್ನಿ ಹಾಗೂ ಮಗ ಸೇರಿದಂತೆ ಕುಟುಂಬ ವರ್ಗವು ಎಲ್ಲಾ ಹಾಲು ತುಪ್ಪ ಬಿಡುವ ಕಾರ್ಯಕ್ಕೆ ಎಲ್ಲಾ ರೀತಿಯ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ. ಈ ಕಾರ್ಯಕ್ಕೆ ಕೇವಲ ಕುಟುಂಬದ ವರ್ಗದವರು ಹಾಗೂ ಹಳ್ಳಿ ಜನರು ಭಾಗಿಯಾಗಲಿದ್ದಾರೆ.