ಈ ಬಾರಿಯ ಪ್ರೊ ಕಬಡ್ಡಿಯಲ್ಲಿ ಕೊನೆಯ ಸ್ಥಾನಗಳಲ್ಲಿ ಉಳಿದುಕೊಂಡಿರುವ ತೆಲುಗು ಟೈಟನ್ಸ್ ಮತ್ತು ಯುಪಿ ಯೋಧಾಸ್ ಹೊರತುಪಡಿಸಿ ಇನ್ನುಳಿದ 10 ತಂಡಗಳಿಗೆ ಸೆಮಿ ಫೈನಲ್ ಪ್ರವೇಶಿಸುವ ಅವಕಾಶವಿದೆ. ಇಂದು ಬೆಂಗಳೂರು ಬುಲ್ಸ್ ಜೈಪುರ್ ಪಿಂಕ್ ಪ್ಯಾಂಥರ್ಸ್ ಮುಖಾಮುಖಿಯಾಗುತ್ತಿದ್ದು, ಬೆಂಗಳೂರು ಬುಲ್ಸ್ ಜಯಭೇರಿಯಾದರೆ ಸೆಮಿ ಫೈನಲ್ ಕನಸನ್ನು ಜೀವಂತವಾಗಿಸಿಕೊಳ್ಳಬಹುದಾಗಿದೆ.
ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ಪುಣೆರೀ ಪಲ್ಟಾನ್ ಸೆಮಿ ಫೈನಲ್ ಗೆ ಲಗ್ಗೆ ಇಡುವುದು ಬಹುತೇಕ ಖಚಿತವಾಗಿದ್ದು, ಬೆಂಗಳೂರು ಬುಲ್ಸ್ ತಂಡಕ್ಕೆ ಮುಂಬರುವ ಎಲ್ಲಾ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಅನಿವಾರ್ಯವಿದೆ. ಪ್ರೊ ಕಬಡ್ಡಿ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿರುವ ಬೆಂಗಳೂರು ಬುಲ್ಸ್ ಇಂದಿನ ಪಂದ್ಯ ಗೆದ್ದರೆ ಆರನೇ ಸ್ಥಾನಕ್ಕೆ ಜಿಗಿಯಬಹುದಾಗಿದೆ. ಪ್ರೊ ಕಬಡ್ಡಿಯ ಮತ್ತೊಂದು ಪಂದ್ಯದಲ್ಲಿ ತಮಿಳ್ ತಲೈವಾಸ್ ಮತ್ತು ಯು ಮುಂಬಾ ಸೆಣಸಾಡಲಿವೆ.
ಯಾವ ತಂಡಗಳು ಸೆಮಿ ಫೈನಲ್ ರಥ ಏರಲಿವೆ ಇನ್ನೇನು ಕೆಲವೇ ದಿನಗಳಲ್ಲಿ ತಿಳಿಯಲಿದೆ.