
ಇಂದು ನಡೆಯಲಿರುವ ಮಹಾರಾಜ ಟ್ರೋಪಿಯ 18ನೇ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಮಂಗಳೂರು ಡ್ರಾಗನ್ಸ್ ಮುಖಮುಖಿಯಾಗಲಿವೆ. ಈಗಾಗಲೇ 17ನೇ ಪಂದ್ಯ ಆರಂಭವಾಗಿದ್ದು, ಶಿವಮೊಗ್ಗ ಲಯನ್ಸ್ ಮತ್ತು ಗುಲ್ಬರ್ಗ ಮೈಸ್ಟಿಕ್ಸ್ ನಡುವೆ ಭರ್ಜರಿ ಹೋರಾಟ ನಡೆಯುತ್ತಿದೆ
ಇಂದು ಸಂಜೆ ನಡೆಯಲಿರುವ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಮಂಗಳೂರು ಡ್ರ್ಯಾಗನ್ಸ್ ನಡವಣ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಗೆ ಗೆಲುವು ಅನಿವಾರ್ಯವಾಗಿದೆ.
ಸತತ ಐದು ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಈ ತಂಡಕ್ಕೆ ಇಂದು ಮಾಡು ಇಲ್ಲವೇ ಮಡಿ ಪದ್ಯವಾಗಿದೆ. ಬೆಂಗಳೂರು ತಂಡಕ್ಕೆ ಬೆನ್ನೆಲುಬಾಗಿ ನಿಂತಿರುವ ಮಾಯಾಂಕ್ ಅಗರ್ವಾಲ್ ಅವರ ಮೇಲೆ ಸಾಕಷ್ಟು ನಿರೀಕ್ಷೆ ಇದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಜೆ 5:30ಕ್ಕೆ ಪಂದ್ಯ ಆರಂಭವಾಗಲಿದೆ.