alex Certify ಇಂದು ಬೆಳಗ್ಗೆ 10 ಗಂಟೆಗೆ ‘ದ್ವಿತೀಯ PUC’ ಫಲಿತಾಂಶ ಪ್ರಕಟ, ಈ ರೀತಿ ಚೆಕ್ ಮಾಡಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ಬೆಳಗ್ಗೆ 10 ಗಂಟೆಗೆ ‘ದ್ವಿತೀಯ PUC’ ಫಲಿತಾಂಶ ಪ್ರಕಟ, ಈ ರೀತಿ ಚೆಕ್ ಮಾಡಿ..!

ಬೆಂಗಳೂರು : ಇಂದು ಬೆಳಗ್ಗೆ 10 ಗಂಟೆಗೆ ‘ದ್ವಿತೀಯ PUC 2024 ’ ಫಲಿತಾಂಶ ಪ್ರಕಟವಾಗಲಿದೆ ಎಂಬ ಅಧಿಕೃತ ಮಾಹಿತಿ ಲಭ್ಯವಾಗಿದೆ. ಇಂದು ಬೆಳಗ್ಗೆ 10 ಗಂಟೆಗೆ ಸುದ್ದಿಗೋಷ್ಟಿ ನಡೆಸುವ ಶಿಕ್ಷಣ ಇಲಾಖೆ ಫಲಿತಾಂಶ ಪ್ರಕಟಿಸಲಿದೆ. 11 ಗಂಟೆಯ ನಂತರ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟವಾಗಲಿದೆ.

ರಾಜ್ಯದ 1,124 ಕೇಂದ್ರಗಳಲ್ಲಿ ಮಾರ್ಚ್ 1ರಿಂದ 22ರವರೆಗೆ ಪರೀಕ್ಷೆಗಳು ನಡೆದಿದ್ದವು. ನೋಂದಣಿ ಮಾಡಿಕೊಂಡ 6.98 ಲಕ್ಷ ವಿದ್ಯಾರ್ಥಿಗಳಲ್ಲಿ ಶೇ. 98ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಕ್ತಾಯವಾಗಿದ್ದು, ಏ.10 ಕ್ಕೆ ‘ದ್ವಿತೀಯ PUC’ ಫಲಿತಾಂಶ ಪ್ರಕಟವಾಗಲಿದೆ.

ಫಲಿತಾಂಶವನ್ನು ಚೆಕ್ ಮಾಡುವುದು ಹೇಗೆ..? ಎಂಬ ಮಾಹಿತಿಯನ್ನು ಮುಂದೆ ಓದಿ ತಿಳಿದುಕೊಳ್ಳಿ.ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ತಮ್ಮ ಪರೀಕ್ಷೆ ಪ್ರವೇಶ ಪತ್ರದಲ್ಲಿ ನೀಡಲಾದ ರಿಜಿಸ್ಟರ್ ನಂಬರ್ / ರೋಲ್ ನಂಬರ್ (ನೋಂದಣಿ ಸಂಖ್ಯೆ) ಬಳಸಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ನೀಡುವ ವೆಬ್ಸೈಟ್ನಲ್ಲಿ ಫಲಿತಾಂಶ ಚೆಕ್ ಮಾಡಬಹುದು.

ಚೆಕ್ ಮಾಡುವುದು ಹೇಗೆ..?
1) ಮೊದಲು https://karresults.nic.in/ ಭೇಟಿ ನೀಡಿ
2) ನಂತರ ದ್ವಿತೀಯ ಪಿಯುಸಿ ರಿಸಲ್ಟ್ ಚೆಕ್ ಮಾಡಲಯ ಲಿಂಕ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಿಮ್ಮ ರಿಜಿಸ್ಟರ್ ನಂಬರ್ ಹಾಕಿ ಚೆಕ್ ಮಾಡಿಕೊಳ್ಳಿ.
ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪ್ರತಿ ವಿಷಯದಲ್ಲಿ ಕನಿಷ್ಠ ಶೇಕಡ.35 ಅಂಕಗಳನ್ನು ಗಳಿಸಿದರೆ ಉತ್ತೀರ್ಣರಾಗಬಹುದು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...