![Arshdeep Singh to play for a new team after IPL 2023 - Crictoday](https://crictoday.com/wp-content/uploads/2023/01/Arshdeep-Singh-Crictoday.jpg)
ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅಂತರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್ನಲ್ಲಿ ಈಗಾಗಲೇ ಸಾಕಷ್ಟು ಭರವಸೆ ಮೂಡಿಸಿದ್ದಾರೆ. ಇಂದು ನಡೆಯಲಿರುವ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ 5ನೇ ಟಿ ಟ್ವೆಂಟಿ ಪಂದ್ಯದಲ್ಲಿ ಇನ್ನು ಮೂರು ವಿಕೆಟ್ ಕಬಳಿಸಿದರೆ ಅಂತರಾಷ್ಟ್ರೀಯ ಟಿ 20 ಕ್ರಿಕೆಟ್ ನಲ್ಲಿ ಅರ್ಷದೀಪ್ 50 ವಿಕೆಟ್ ಗಳನ್ನು ಪಡೆದುಕೊಂಡಂತಾಗುತ್ತದೆ.
ಏಕದಿನ ವಿಶ್ವಕಪ್ ಗೆ ಅವಕಾಶ ಗಿಟ್ಟಿಸಿಕೊಳ್ಳಲು ಸಾಕಷ್ಟು ಬೌಲರ್ಗಳು ಸೆಣಸಾಡುತ್ತಿದ್ದು, ಈ ಸಾಲಿನಲ್ಲಿ ಅರ್ಷದೀಪ್ ಸಿಂಗ್ ಕೂಡ ಇದ್ದಾರೆ. ನಿನ್ನೆಯ ಪದ್ಯದಲ್ಲಿ ಭಾರತ ತಂಡ ಒಂಬತ್ತು ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸುವ ಮೂಲಕ ಸರಣಿ ಸಮಬಲ ಮಾಡಿಕೊಂಡಿದ್ದು, ಈ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಮೂರು ವಿಕೆಟ್ ತೆಗೆಯುವ ಮೂಲಕ ಗಮನ ಸೆಳೆದಿದ್ದಾರೆ. ಇಂದು ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ಅಂತಿಮ ಪಂದ್ಯ ನಡೆಯಲಿದ್ದು, ಸಿಕ್ಸರ್ ಗಳ ಮನರಂಜನೆ ಪಡೆಯಲು ಪ್ರೇಕ್ಷಕರು ಸಜ್ಜಾಗಿದ್ದಾರೆ.