ಆದಿತ್ಯ ಕರೆಗೌಡ ಹಾಗೂ ‘ಭೂಮಿಗೆ ಬಂದ ಭಗವಂತ’ ಧಾರಾವಾಹಿ ಖ್ಯಾತಿಯ ಅಂಕಿತ ಜೈರಾಮ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಕಾಗದ’ ಚಿತ್ರ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಸೌಂಡ್ ಮಾಡುತ್ತಿದ್ದು, ಇನ್ನೇನು ತೆರೆ ಮೇಲೆ ಬರಲು ಸಜ್ಜಾಗಿದೆ. ಕಾಗದ ಚಿತ್ರದ ಮತ್ತೊಂದು ವಿಡಿಯೋ ಹಾಡು ಇಂದು ಜಾನಕರ್ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ. ‘ಅಲ್ಲಾ ಸುಭಾನಲ್ಲ’ ಎಂಬ ಈ ಹಾಡಿಗೆ ಹರ್ಷ ರಂಜಿನಿ ಧ್ವನಿಯಾಗಿದ್ದು, ಪ್ರದೀಪ್ ವರ್ಮ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ವಿ ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವಿದೆ.
ಅಮ್ಮ ಸಿನಿ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ಅರುಣ್ ಕುಮಾರ್ ಎ ನಿರ್ಮಾಣ ಮಾಡಿದ್ದು, ಆದಿತ್ಯ ಕರೆಗೌಡ ಮತ್ತು ಅಂಕಿತ ಜೈರಾಮ್ ಸೇರಿದಂತೆ ನೇಹಾ ಪಾಟೀಲ್, ಬಾಲರಾಜ್ವಾಡಿ, ಅಶ್ವಥ್ ನೀನಾಸಂ, ಶಿವ ಮಂಜು, ಗೌತಮ್ ರಾಜ್, ಸುರೇಶ್ ಬಾಬು, ಆದರ್ಶ್ ಮತ್ತು ತೇಜಸ್ವಿ ತೆರೆ ಹಂಚಿಕೊಂಡಿದ್ದಾರೆ. ವೇಣುಸ್ ನಾಗರಾಜ್ ಮೂರ್ತಿ ಛಾಯಾಗ್ರಾಣ, ಪವನ್ ಗೌಡ ಅವರ ಸಂಕಲನವಿದೆ.