ತಂಬಾಕು ದೈತ್ಯ ಫಿಲಿಪ್ ಮೋರಿಸ್, ಬ್ರಿಟನ್ ಧೂಮಪಾನಿಗಳಿಗೆ ಶಾಕಿಂಗ್ ನ್ಯೂಸ್ ನೀಡಿದೆ. ಮುಂದಿನ ಹತ್ತು ವರ್ಷಗಳಲ್ಲಿ ಬ್ರಿಟನ್‌ನಲ್ಲಿ ಸಿಗರೇಟ್ ಮಾರಾಟವನ್ನು ನಿಲ್ಲಿಸಲಿದೆ. ಪ್ರಸಿದ್ಧ ಮಾರ್ಲ್‌ಬೊರೊ ಬ್ರಾಂಡ್ ಮಾರುಕಟ್ಟೆಯಿಂದ ಕಣ್ಮರೆಯಾಗಲಿದೆ. ವಿಶ್ವದ ಅತಿದೊಡ್ಡ ಸಿಗರೇಟ್ ಕಂಪನಿಯ ಈ ನಿರ್ಧಾರವು ಬ್ರಿಟನ್‌ನಲ್ಲಿ ಬಹಳ ಜನಪ್ರಿಯವಾಗಿದೆ.
ಫಿಲಿಪ್ ಮೋರಿಸ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಜಾಸೆಕ್ ಓಲ್ಜಾಕ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬ್ರಿಟನ್‌ನಲ್ಲಿ ಧೂಮಪಾನ ಚಟವನ್ನು ಕೊನೆಗೊಳಿಸುವ ಅಭಿಯಾನದ ಭಾಗವಾಗಿ ಕಂಪನಿಯು ಈ ನಿರ್ಧಾರ ತೆಗೆದುಕೊಂಡಿದೆ ಎಂದವರು ಹೇಳಿದ್ದಾರೆ. ಮುಂದಿನ 10 ವರ್ಷಗಳಲ್ಲಿ ಮಾರ್ಲ್‌ಬೊರೊ ಬ್ರಾಂಡ್ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ.
ಧೂಮಪಾನ ಮುಂದುವರಿಸಲು ಇಚ್ಛಿಸುವ ಜನರಿಗೆ ಇ-ಸಿಗರೇಟ್ ಅಥವಾ ಬಿಸಿ ಮಾಡಿದ ತಂಬಾಕು ಸಾಧನ ಬಳಸಲು ಪ್ರೋತ್ಸಾಹಿಸಲಾಗುವುದು ಎಂದವರು ಹೇಳಿದ್ದಾರೆ. 2030ರ ವೇಳೆಗೆ ಧೂಮಪಾನ ಮುಕ್ತ ದೇಶವನ್ನಾಗಿ ಮಾಡುವ ಘೋಷಣೆಯನ್ನು ಬ್ರಿಟನ್ ಸರ್ಕಾರ ತೆಗೆದುಕೊಂಡಿದೆ. ಸರ್ಕಾರದ ಈ ನಿರ್ಧಾರಕ್ಕೆ ಅನೇಕ ಕಂಪನಿಗಳು ಕೈಜೋಡಿಸಿವೆ. ಈ ಅಭಿಯಾನದಡಿ ಬ್ರಿಟನ್ ನಲ್ಲಿ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಲ್ಲಿಸುವ ಯೋಜನೆ ಕೈಗೊಳ್ಳಲಾಗ್ತಿದೆ. ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಬ್ರಿಟನ್ ಜನರ ಮೊದಲ ಆಯ್ಕೆಯಾಗಿರುವ ಮಾರ್ಲ್‌ಬೊರೊ ಮಾರುಕಟ್ಟೆಯಲ್ಲಿ ಸಿಗಲ್ಲ ಎಂಬುದನ್ನು ಬ್ರಿಟನ್ ಜನರಿಗೆ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ.