![](https://kannadadunia.com/wp-content/uploads/2023/12/B.Ed-.jpg)
ಬೆಂಗಳೂರು : 2023-24 ನೇ ಸಾಲಿನ ಬಿ.ಎಡ್ ಕೋರ್ಸ್ ಪ್ರವೇಶಕ್ಕೆ ಸಂಬಂಧಿಸಿದಂತೆ ಸರ್ಕಾರಿ ಕೋಟಾ ಸೀಟುಗಳ ಹಂಚಿಕೆಯ ಮೊದಲ ಪಟ್ಟಿ ಇಂದು ಪ್ರಕಟವಾಗಲಿದೆ.
ಶಿಕ್ಷಣ ಇಲಾಖೆಯ ಕೇಂದ್ರೀಯ ದಾಖಲಾತಿ ಘಟಕ ಈ ಬಗ್ಗೆ ಮಾಹಿತಿ ನೀಡಿದ್ದು, ಇಂದು ಮಧ್ಯಾಹ್ನದ ವೇಳೆಗೆ ವೆಬ್ ಸೈಟ್ ಡಿಡಿಡಿ schooleducation.karnataka.gov.in ನಲ್ಲಿ ಪಟ್ಟಿ ಪ್ರಕಟಿಸಲಾಗುತ್ತದೆ.
ಸೀಟು ಹಂಚಿಕೆಯಾದ ಬಳಿಕ ಅರ್ಹ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಚಲನ್ ಡೌನ್ ಲೋಡ್ ಮಾಡಿಕೊಂಡು ದಾಖಲಾತಿ ಶುಲ್ಕವನ್ನು ಎಸ್ ಬಿಐನಲ್ಲಿ ಪಾವತಿಸಿ ಡಿಸೆಂಬರ್ 30 ರಿಂದ ಜನವರಿ 3 ರೊಳಗೆ ಚಲನ್ ಪ್ರತಿಯನ್ನು ನೋಡಲ್ ಕೇಂದ್ರದಲ್ಲಿ ಸಲ್ಲಿಸುವಂತೆ ತಿಳಿಸಲಾಗಿದೆ.