![](https://kannadadunia.com/wp-content/uploads/2024/02/cet.jpg)
ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಸಿಇಟಿ-24ಕ್ಕೆ ಸಲ್ಲಿಸಿದ ಅರ್ಜಿಗಳ ತಿದ್ದುಪಡಿ ಸಂಬಂಧ ಕೆಲ ಮಾದರಿ ಹಾಗೂ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈಗಾಗಲೇ ಅರ್ಜಿ ಸಲ್ಲಿಸಿರುವವರು ಫೆಬ್ರವರಿ 10ರಿಂದ ಅರ್ಜಿ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ರಾಷ್ಟ್ರೀಯತೆ, ವಿಳಾಸ, ಬ್ಯಾಂಕ್ ಮಾಹಿತಿ, ಮೀಸಲಾತಿ, ಆರ್.ಡಿ.ಸಂಖ್ಯೆ, ಅಪ್‌ಲೋಡ್ ಮಾಡಿರುವ ದಾಖಲಾತಿಗಳು, ಆಯ್ಕೆ ಮಾಡಿರುವ ಕೋರ್ಸ್‌ಗಳು, ಪರೀಕ್ಷಾ ಕೇಂದ್ರಗಳು, ಪಿಯುಸಿ ರಿಜಿಸ್ಟರ್ ಸಂಖ್ಯೆಯನ್ನು ತಿದ್ದುಪಡಿ ಮಾಡಬಹುದಾಗಿದೆ.
ಸೂಚನೆ: ಹೆಚ್ಚುವರಿ ಸ್ಯಾಟ್ಸ್ ಸಂಖ್ಯೆ ನಮೂದಿಸಬಹುದು. ಆದರೆ, ಹಾಲಿ ಸ್ಯಾಟ್ಸ್ ಬದಲಾಯಿಸಲು ಅವಕಾಶವಿಲ್ಲ