ಬೆಂಗಳೂರು : ಪಂಚಮಿತ್ರವು ಕರ್ನಾಟಕ ಗ್ರಾಮ ಪಂಚಾಯತಿಗಳ ಮುಖಪುಟವಾಗಿದ್ದು, ಸಾರ್ವಜನಿಕರ ಮಾಹಿತಿಯ ವೇದಿಕೆಯಾಗಿದೆ. ಯಾವುದೇ ಗ್ರಾಮ ಪಂಚಾಯಿತಿಯ ಚುನಾಯಿತ ಸದಸ್ಯರ, ಪಂಚಾಯಿತಿ ಸಿಬ್ಬಂದಿಗಳ, ಗ್ರಾಮ ಪಂಚಾಯಿತಿಯ ಸಭಾ ನಡುವಳಿಗಳು, ಮುಂಬರುವ ಸಭೆಗಳ ದಿನಾಂಕ ಮತ್ತು ಅದರಲ್ಲಿ ಚರ್ಚಿಸುವ ವಿಷಯಗಳು, ಗ್ರಾಮ ಪಂಚಾಯಿತಿಯ ಆದಾಯ, ಇತ್ಯಾದಿ ಮಾಹಿತಿಯನ್ನು ಸಾರ್ವಜನಿಕರು ತಿಳಿಯಬಹುದು.
ವಾಟ್ಸಾಪ್ ಚಾಟ್ ಆರಂಭಿಸಲಾಗಿದ್ದು, 8277506000 ಸಂಖ್ಯೆಗೆ ವಾಟ್ಸಾಪ್ ಸಂದೇಶ ಕಳುಹಿಸಿದರೆ ಅಧಿಕೃತ ವಾಟ್ಸಾಪ್ ಚಾಟ್ ಆರಂಭಗೊಳ್ಳುತ್ತದೆ. ನಂತರ ಭಾಷೆ, ಜಿಲ್ಲೆ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಆಯ್ಕೆ ಮಾಡಿ. ಅಗತ್ಯವಿರುವ ಮಾಹಿತಿ ತಿಳಿಯಬಹುದು.
ಪಂಚಮಿತ್ರ ವಾಟ್ಸಪ್ ಚಾಟ್ ನಲ್ಲಿ ಸಿಗಲಿವೆ ಈ ಎಲ್ಲಾ ಸೇವೆಗಳು
ಕಟ್ಟಡ ನಿರ್ಮಾಣ ಪರವಾನಗಿ
ಹೊಸ ನೀರು ಸರಬರಾಜು ಸಂಪರ್ಕ
ನಿರಾಕ್ಷೇಪಣಾ ಪತ್ರ
ನೀರು ಸರಬರಾಜಿನ ಸಂಪರ್ಕ ಕಡಿತ
ಕುಡಿಯುವ ನೀರಿನ ನಿರ್ವಹಣೆ
ನರೇಗಾ ಅಡಿ ಕಾರ್ಮಿಕರಿಗೆ ಜಾಬ್ ಕಾರ್ಡ್ ವಿತರಣೆ
ಬೀದಿ ದೀಪದ ನಿರ್ವಹಣೆ
ಗ್ರಾಮ ನೈರ್ಮಲ್ಯ ನಿರ್ವಹಣೆ
ವ್ಯಾಪಾರ ಪರವಾನಗಿ
ಸ್ವಾಧೀನ ಪ್ರಮಾಣ ಪತ್ರ
ರಸ್ತೆ ಅಗೆಯುವುದಕ್ಕಾಗಿ ಅನುಮತಿ
ಕಾರ್ಮಿಕರಿಗೆ ಉದ್ಯೋಗ ಒದಗಿಸುವುದು
ಕೈಗಾರಿಕೆ, ಕೃಷಿ ಆಧಾರಿತ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮತಿ
ಹೊಸ/ಅಸ್ತಿತ್ವದಲ್ಲಿರುವ ದೂರಸಂಪರ್ಕ ಮೂಲಸೌಕರ್ಯ ಗೋಪುರಕ್ಕೆ ಅನುಮತಿ,
ಹೊಸ/ಅಸ್ತಿತ್ವದಲ್ಲಿರುವ ಓವರ್ ಗೌಂಡ್‌ಕೇಬಲ್ ಕೇಬಲ್ ಮೂಲ
ಮೂಲಸೌಕರ್ಯ/ಭೂಗತ ಸೌಕರ್ಯಕ್ಕಾಗಿ ಅನುಮತಿ,ನಿಯಮಿತಗೊಳಿಸುವಿಕೆ