ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಯಡಿ ಯಜಮಾನಿಯರಿಗೆ 2,000 ರೂ. ನೀಡಲಾಗುತ್ತಿದ್ದು, ಕೆಲವರಿಗೆ ಹಣ ಬಂದಿಲ್ಲ. ಕೆಲವರು ನಮ್ಮ ಅಕೌಂಟ್ ಗೆ 2-3 ತಿಂಗಳಿನಿಂದ ಹಣ ಬರುತ್ತಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಆರೋಪಕ್ಕೆ ಸ್ಪಷ್ಟನೆ ನೀಡಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ʼಜೂನ್ ಹಾಗೂ ಜುಲೈ ತಿಂಗಳ ಕಂತುಗಳು ಇನ್ನೂ ಜಮಾ ಮಾಡಿಲ್ಲ. ಎರಡ್ಮೂರು ದಿನಗಳಲ್ಲಿ ಮಹಿಳೆಯರ ಖಾತೆ ಜಮಾ ಮಾಡಲಾಗುತ್ತದೆʼ ಎಂದು ಹೇಳಿದ್ದರು.
ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಏನು ಮಾಡಬೇಕು..?
1) ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಬೇಕಾದರೆ ರೇಷನ್ ಕಾರ್ಡ್ನಲ್ಲಿರುವ ಪ್ರತಿಯೊಬ್ಬ ಸದಸ್ಯರೂ ಕೂಡ ಇ-ಕೆವೈಸಿ ಮಾಡಿಸಬೇಕು.
2) ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಂಡಿರುವ ಮಹಿಳೆಯರು ತಪ್ಪದೇ ತಮ್ಮ ಖಾತೆಗೆ ಇ-ಕೆವೈಸಿ ಮಾಡಿಸಬೇಕು.
3) ಗೃಹ ಲಕ್ಷ್ಮಿ ಫಲಾನುಭವಿಗಳಿಗೆ NPCI ಕಡ್ಡಾಯಗೊಳಿಸಿದೆ. ಗೃಹ ಲಕ್ಷ್ಮಿ ಫಲಾನುಭವಿಗಳು ಕಡ್ಡಾಯವಾಗಿ E -KYC , ಆಧಾರ್ ಸೀಡಿಂಗ್ ಮಾಡಿಸಬೇಕಾಗಿದೆ.
4) ಗೃಹಲಕ್ಷ್ಮಿ ಯೋಜನೆಯಡಿ ಖಾತೆಗೆ ಹಣ ಬಾರದಿರುವವರು ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ. ಹೀಗಾಗಿ ರೇಷನ್ ಕಾರ್ಡ್ಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಿ.
5) ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿ ಮಾಡಿಕೊಂಡು ಹಣ ಬಾರದ ಫಲಾನುಭವಿಗಳು ಕೂಡಲೇ ಅರ್ಜಿಯೊಂದಿಗೆ ಇ-ಕೆವೈಸಿ ಸಂಬಂಧಿತ ಸಮಸ್ಯೆಗಳನ್ನು ಬ್ಯಾಂಕ್ಗಳಲ್ಲಿ ಪರಿಹರಿಸಿಕೊಳ್ಳಬೇಕು.
6) ಕೆಲವೊಮ್ಮೆ ಖಾತೆಗೆ ಹಣ ಜಮೆಯಾಗಿದ್ದರ ಬಗ್ಗೆ ಮೊಬೈಲ್ SMS ಬರುತ್ತದೆ. ಹಲವು ಬಾರಿ SMS ಬರುವುದಿಲ್ಲ. ಇಂತಹ ಸಮಯದಲ್ಲಿ ನೀವು ಬ್ಯಾಂಕ್ನಲ್ಲಿ ಹೋಗಿ ಪಾಸ್ಬುಕ್ ಚೆಕ್ ಮಾಡಿಸಬೇಕು.