alex Certify ಸದಾ ಯಂಗ್ ಆಗಿರಲು ನಿಮ್ಮ ʼಆಹಾರʼದಲ್ಲಿರಲಿ ಸಿಹಿ ಆಲೂಗಡ್ಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸದಾ ಯಂಗ್ ಆಗಿರಲು ನಿಮ್ಮ ʼಆಹಾರʼದಲ್ಲಿರಲಿ ಸಿಹಿ ಆಲೂಗಡ್ಡೆ

Eating sweet potato's is very beneficial for health | ಸಿಹಿ ಆಲೂಗಡ್ಡೆ ಸೇವನೆ ಆರೋಗ್ಯಕ್ಕೆ ಹೇಗೆ ಪ್ರಯೋಜನ ನೀಡಲಿದೆ ತಿಳಿಯಿರಿ Lifestyle News in Kannada

ಸಿಹಿ ಆಲೂಗಡ್ಡೆ ಹೆಸರನ್ನು ನೀವು ಕೇಳಿಯೇ ಇರ್ತೀರಾ. ದೇಶದ ಎಲ್ಲ ಭಾಗಗಳಲ್ಲಿಯೂ ಸಿಹಿ ಆಲೂಗಡ್ಡೆ ಸಿಗುತ್ತೆ. ರುಚಿ ಹಾಗೂ ಆರೋಗ್ಯಕ್ಕೆ ಒಳ್ಳೆಯದಾದ ಈ ಸಿಹಿ ಆಲೂಗಡ್ಡೆ ಚಳಿಗಾಲದಲ್ಲಿ ಹೇಳಿ ಮಾಡಿಸಿದ ಆಹಾರ.

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ ಕ್ಯಾನ್ಸರ್ ನಂತಹ ರೋಗವನ್ನು ಗುಣಪಡಿಸುವ ಶಕ್ತಿ ಈ ಸಿಹಿ ಆಲೂಗಡ್ಡೆಗಿದೆ. ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿ ಈ ಸಿಹಿ ಆಲೂಗಡ್ಡೆಗಿದೆ.

ಸಿಹಿ ಆಲೂಗಡ್ಡೆ ಸೇವನೆಯಿಂದ ಕಣ್ಣಿನ ಕಾಂತಿ ಕಡಿಮೆಯಾಗುವುದಿಲ್ಲ. ದೃಷ್ಠಿ ದೋಷವಿರುವವರು ಇದನ್ನು ಸೇವನೆ ಮಾಡಿದ್ರೆ ಬಹಳ ಒಳ್ಳೆಯದು.

ಸಿಹಿ ಆಲೂಗಡ್ಡೆ ಸೇವನೆ ಮಾಡುವುದರಿಂದ ಚರ್ಮದಲ್ಲಿ ಸುಕ್ಕು ಕಾಣಿಸಿಕೊಳ್ಳುವುದಿಲ್ಲ. ಚರ್ಮ ಸ್ವಚ್ಛ-ಶುದ್ಧವಾಗಿರುವ ಜೊತೆಗೆ ಸದಾ ಯೌವ್ವನದಲ್ಲಿರುವಂತೆ ಕಾಣಲು ಸಹಾಯವಾಗುತ್ತದೆ.

ಬೀಟಾ-ಕ್ಯಾರೋಟಿನ್ ಅಂಶ ಜಾಸ್ತಿ ಇರುತ್ತದೆ. ಆಂಟಿ ಆಕ್ಸಿಡೆಂಟ್ ಅಂಶ ಕೂಡ ಇದರಲ್ಲಿರುತ್ತದೆ. ಇದು ಸೂರ್ಯನ ನೇರಳಾತೀತ ಕಿರಣಗಳಿಂದ ಚರ್ಮಕ್ಕೆ ರಕ್ಷಣೆ ನೀಡುತ್ತದೆ.

ಜೀವಸತ್ವ ಬಿ-6 ಹಾಗೂ ಪೋಟ್ಯಾಶಿಯಮ್ ಅಂಶ ಕೂಡ ಹೆಚ್ಚಿರುತ್ತದೆ. ರಕ್ತದೊತ್ತಡ ನಿಯಂತ್ರಣಕ್ಕೆ ಇದು ಸಹಕಾರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...