ನೋವಿನಿಂದ ಬಳಲುತ್ತಿದ್ದ ಮೊಸಳೆಯನ್ನು ರಕ್ಷಿಸಲು ರೈಲ್ವೆ ಸಿಬ್ಬಂದಿ 20 ನಿಮಿಷಗಳ ಕಾಲ ರಾಜಧಾನಿ ಎಕ್ಸ್ಪ್ರೆಸ್ ರೈಲನ್ನು ನಿಲ್ಲಿಸಿದ ಘಟನೆಯು ಗುಜರಾತ್ನ ಕಜ್ರಾನ್ನಲ್ಲಿ ನಡೆದಿದೆ.
ಮುಂಜಾನೆ 3 ಗಂಟೆ ಸುಮಾರಿಗೆ ರೈಲ್ವೆ ಹಳಿಗಳ ಬಳಿ ಗಸ್ತು ತಿರುಗುತ್ತಿದ್ದ ತಂಡವು ಹಳಿಯ ಮೇಲೆ ಗಾಯಗೊಂಡ ಮೊಸಳೆಯು ಇರುವುದರ ಬಗ್ಗೆ ಕಜ್ರಾನ್ ರೈಲು ನಿಲ್ದಾಣಕ್ಕೆ ಮಾಹಿತಿ ನೀಡಿತ್ತು. ಕೂಡಲೇ ರೈಲ್ವೆ ನಿಲ್ದಾಣದ ಸೂಪರಿಟೆಂಡೆಂಟ್ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ರೈಲನ್ನು ಕೆಲ ಕಾಲ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಸ್ಟೇಷನ್ ಸೂಪರಿಟೆಂಡೆಂಟ್ ಸಂತೋಷ್ ಕುಮಾರ್, ಮುಂಜಾನೆ ಮೂರು ಗಂಟೆ ಸುಮಾರಿಗೆ ನಮ್ಮ ಗಸ್ತು ತಂಡವು ಗಾಯಗೊಂಡ ಮೊಸಳೆಯು ಹಳಿಯ ಮೇಲೆ ಇದ್ದ ಬಗ್ಗೆ ಮಾಹಿತಿ ನೀಡಿದೆ. ರೈಲ್ವೆ ನಿಲ್ದಾಣದಿಂದ 5 ಕಿಲೋಮೀಟರ್ ದೂರದಲ್ಲಿರುವ ಹಳಿಯಲ್ಲಿ ಮೊಸಳೆ ಪತ್ತೆಯಾಗಿತ್ತು ಎಂದು ಹೇಳಿದರು.
ಮನೆಯೊಳಗೆ ಪ್ರವೇಶಿಸಿದ ಅನಿರೀಕ್ಷಿತ ಅತಿಥಿ ಕಂಡು ಬೆಚ್ಚಿಬಿದ್ದ ಜನ..!
ಮುಂಬೈಗೆ ತೆರಳುತ್ತಿದ್ದ ರಾಜಧಾನಿ ಎಕ್ಸ್ಪ್ರೆಸ್ ವಡೋದರಾ – ಮುಂಬೈ ಮುಖ್ಯ ಮಾರ್ಗದಲ್ಲಿ ಸಂಚರಿಸುತ್ತಿತ್ತು. ಮೊಸಳೆಯ ಪ್ರಾಣವನ್ನು ಉಳಿಸುವ ಸಲುವಾಗಿ ನಾವು ರೈಲನ್ನು 20 ನಿಮಿಷಗಳ ಕಾಲ ನಿಲ್ಲಿಸಿದೆವು ಎಂದು ಹೇಳಿದ್ದಾರೆ.
ಹಳಿಯ ಮೇಲೆ ಮಲಗಿದ್ದ ಮೊಸಳೆಯ ತಲೆಯಲ್ಲಿ ಗಾಯವಾಗಿತ್ತು. ಅಲ್ಲದೇ ಅದಕ್ಕೆ ತನ್ನ ದವಡೆಯನ್ನು ಅಲುಗಾಡಿಸಲೂ ಸಾಧ್ಯವಾಗುತ್ತಿರಲಿಲ್ಲ. ಕೂಡಲೇ ನಾವು ಅದನ್ನು ಹಳಿಯಿಂದ ಬೇರೆ ಸ್ಥಳಕ್ಕೆ ಸ್ಥಳಾಂತರಿಸಿ ಪ್ರಥಮ ಚಿಕಿತ್ಸೆ ನೀಡಿದೆವು. ಆದಾಗ್ಯೂ ಮೊಸಳೆ ಬದುಕುಳಿಯಲಿಲ್ಲ ಎಂದು ವನ್ಯಜೀವಿ ಕಾರ್ಯಕರ್ತ ಹೇಮಂತ್ ವಧ್ವಾನ ಹೇಳಿದ್ದಾರೆ.