ಜನರ ಜೀವನವನ್ನು ಉತ್ತಮಗೊಳಿಸಲು ಜಪಾನ್ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಸರ್ಕಾರ ಎಲ್ಲ ಕಂಪನಿಗಳಿಗೆ ಮಹತ್ವದ ಸೂಚನೆ ನೀಡಿದೆ. ವಾರದಲ್ಲಿ ಐದು ದಿನದ ಬದಲು ನಾಲ್ಕು ದಿನ ಮಾತ್ರ ಕೆಲಸ ಮಾಡುವ ಆಯ್ಕೆ ನೀಡಬೇಕೆಂದು ಸರ್ಕಾರ ಸೂಚನೆ ನೀಡಿದೆ.
ಜನರು ಉದ್ಯೋಗ, ಕುಟುಂಬದ ಜವಾಬ್ದಾರಿಗಳು ಮತ್ತು ಹೊಸ ಕೌಶಲ್ಯಗಳನ್ನು ಕಲಿಯುವದರ ಜೊತೆ ಸಮತೋಲನ ಸಾಧಿಸಬಹುದೆಂಬ ಕಾರಣಕ್ಕೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ವಾರದ ಯಾವ ನಾಲ್ಕು ದಿನ ಕೆಲಸ ಮಾಡಬೇಕು ಎಂಬುದನ್ನು ನೌಕರರು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಜಪಾನ್ ಸರ್ಕಾರ ಈ ಬಗ್ಗೆ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ. ಕೆಲವರು ರಜೆ ಪಡೆದ್ರೆ ಮತ್ತೆ ಕೆಲವರು ಕಚೇರಿಯಲ್ಲಿ ಕೆಲಸ ಮಾಡಲಿದ್ದಾರೆ. ರಜೆ ಪಡೆದವರು ಹೊರಗೆ ಹೋಗುವುದ್ರಿಂದ ಆರ್ಥಿಕ ಪ್ರಯೋಜನವೂ ಆಗಲಿದೆ ಎಂಬುದು ಸರ್ಕಾರದ ಉದ್ದೇಶವಾಗಿದೆ.
ಯುವ ದಂಪತಿ ರಜೆಯ ಮೇಲೆ ಹೊರಗೆ ಹೋಗುತ್ತಾರೆ ಎಂದು ಸರ್ಕಾರ ಭಾವಿಸಿದೆ. ಮದುವೆಯಾಗಿ ಮಕ್ಕಳನ್ನು ಪಡೆಯಲು ಇದು ಸಹಾಯವಾಗುತ್ತದೆ. ಆರ್ಥಿಕತೆ ಲಾಭದ ಜೊತೆ ಜನನ ಪ್ರಮಾಣ ಕುಸಿಯುವ ಸಮಸ್ಯೆಯೂ ಸುಧಾರಿಸಲಿದೆ ಎಂದು ಸರ್ಕಾರ ಹೇಳಿದೆ. ಅತಿಯಾದ ಕೆಲಸದ ಒತ್ತಡದಿಂದ ನೌಕರರು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಇದನ್ನು ತಪ್ಪಿಸಲು ಇದು ನೆರವಾಗಲಿದೆ.