ಪಿತೃಪಕ್ಷ ಹತ್ತಿರ ಬರ್ತಿದೆ. ವರ್ಷದಲ್ಲಿ 15 ದಿನಗಳ ಕಾಲ ಪೂರ್ವಜರ ಪೂಜೆ ಮಾಡಲಾಗುತ್ತದೆ. ಈ ಬಾರಿ ಸೆಪ್ಟೆಂಬರ್ 30 ರಿಂದ ಪಿತೃಪಕ್ಷವಿದೆ. ಪಿತೃ ಪಕ್ಷದಲ್ಲಿ ಪೂರ್ವಜರ ಪೂಜೆ ಮಾಡುವುದ್ರಿಂದ ಸಾಕಷ್ಟು ಲಾಭ ಪ್ರಾಪ್ತಿಯಾಗುತ್ತದೆ.
ಪಿತೃ ಪಕ್ಷದಲ್ಲಿ ಪೂರ್ವಜರ ಆರಾಧನೆ ಮಾಡುವುದ್ರಿಂದ ಮನುಷ್ಯನ ಆಯಸ್ಸು ಹೆಚ್ಚಾಗುತ್ತದೆ.
ಪೂರ್ವಜರು ಶ್ರಾದ್ಧದಿಂದ ತೃಪ್ತರಾದ್ರೆ ವಂಶಾಭಿವೃದ್ಧಿಗೆ ಆಶೀರ್ವಾದ ಮಾಡುತ್ತಾರೆ.
ಕುಟುಂಬದಲ್ಲಿ ಧನ-ದಾನ್ಯ, ಸಂಪತ್ತಿನ ವೃದ್ಧಿಯಾಗುತ್ತದೆ.
ಶ್ರಾದ್ಧದಿಂದ ಮನುಷ್ಯನಿಗೆ ಬಲ ಹಾಗೂ ಶಕ್ತಿ ದೊರೆಯುತ್ತದೆ. ಎಲ್ಲ ರೀತಿಯ ಸಂತೋಷ, ಮೋಕ್ಷ, ಸ್ವರ್ಗ ಪ್ರಾಪ್ತಿಯಾಗುತ್ತದೆ.
ಪೂರ್ವಜರ ಆರಾಧನೆಯಿಂದ ಯಾವುದೇ ಜಗಳ, ಗಲಾಟೆ ನಡೆಯುವುದಿಲ್ಲ. ಸುತ್ತಮುತ್ತಲಿನ ಜನರು ತೃಪ್ತರಾಗಿರುತ್ತಾರೆ.
ಪೂರ್ವಜರಿಗಾಗಿ ಶ್ರಾದ್ಧ ಮಾಡುವ ಜೊತೆಗೆ ದಾನ ಮಾಡಬೇಕು. ಅಗತ್ಯವಿರುವವರಿಗೆ ದಾನ ಮಾಡಿದ್ರೆ ಪೂರ್ವಜರು ಸಂತೃಪ್ತರಾಗುತ್ತಾರೆ.