alex Certify ಬೇಸಿಗೆಯಲ್ಲಿ ಮೊಡವೆಯಿಂದ ಮುಕ್ತಿ ಹೊಂದಲು ರಾತ್ರಿ ಮಲಗುವ ಮುನ್ನ ತಪ್ಪದೇ ಮಾಡಿ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ಮೊಡವೆಯಿಂದ ಮುಕ್ತಿ ಹೊಂದಲು ರಾತ್ರಿ ಮಲಗುವ ಮುನ್ನ ತಪ್ಪದೇ ಮಾಡಿ ಈ ಕೆಲಸ

ಬೇಸಿಗೆಯಲ್ಲಿ ಹೆಚ್ಚು ಬೆವರುವುದರಿಂದ ಮುಖದ ಮೇಲೆ ಧೂಳು, ಕೊಳೆ ಕುಳಿತುಕೊಳ್ಳುತ್ತದೆ. ಇದರಿಂದ ಮೊಡವೆಗಳ ಸಮಸ್ಯೆ ಕಾಡುತ್ತದೆ. ಹಾಗಾಗಿ ಬೇಸಿಗೆ ಕಾಲದಲ್ಲಿ ಮೊಡವೆಗಳ ಸಮಸ್ಯೆ ದೂರವಾಗಿಸಲು ರಾತ್ರಿ ನಿದ್ರೆ ಮಾಡುವ ಮುನ್ನ ಈ ಟಿಪ್ಸ್ ಫಾಲೋ ಮಾಡಿ.

-ಮಲಗುವ ವೇಳೆ ಮುಖವನ್ನು ಚೆನ್ನಾಗಿ ತೊಳೆದುಕೊಂಡು ಮಾಯಿಶ್ಚರೈಸರ್ ಹಚ್ಚಿ. ಹಾಗೇ ನೈಸರ್ಗಿಕ ಎಣ್ಣೆಯಿಂದ ಮುಖವನ್ನು ಮಸಾಜ್ ಮಾಡಿ.

-ಬೆಡ್ ಶೀಟ್ ನಲ್ಲಿರುವ ಧೂಳು ಮುಖದ ಮೇಲೆ ಕುಳಿತು ಮುಖದ ಚರ್ಮದ ಸಮಸ್ಯೆಯನ್ನುಂಟು ಮಾಡುವುದರಿಂದ ಮಲಗುವ ಮುನ್ನ ಕ್ಲೀನ್ ಆದ ಬೆಡ್ ಶೀಟ್ ಗಳನ್ನು ಬಳಸಿ.

-ನೀವು ನಿದ್ರೆ ಮಾಡುವ ಭಂಗಿಯು ಕೆಲವೊಮ್ಮೆ ಮೊಡವೆಗಳಿಗೆ ಕಾರಣವಾಗಬಹುದು. ಹಾಗಾಗಿ ಮಲಗುವಾಗ ಮುಖವನ್ನು ಕೆಳಗೆ ಮಾಡಿ ಮಲಗಬೇಡಿ. ಬೆನ್ನಿನ ಮೇಲೆ ಮಲಗುವುದು ಒಳ್ಳೆಯದು.

-ಚರ್ಮದ ಆರೋಗ್ಯಕ್ಕೆ ನೀರು ಬಹಳ ಉತ್ತಮ. ಹಾಗಾಗಿ ಪ್ರತಿದಿನ ರಾತ್ರಿ ಮಲಗುವ ಮುನ್ನ ನೀರನ್ನು ಕುಡಿಯಿರಿ. ಇದರಿಂದ ಚರ್ಮ ಹೈಡ್ರೇಟ್ ಆಗಿರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...