ರೊಟ್ಟಿ ಬೇಯಿಸುವ ತವಾ ಸ್ವಚ್ಛಗೊಳಿಸುವುದು ಸವಾಲಿನ ಕೆಲಸ. ಕಪ್ಪಗಾದ ತವಾ ಮೇಲೆ ರೊಟ್ಟಿ ಹಾಕಿದ್ರೆ ಅದು ಹಿಡಿದುಕೊಳ್ಳುತ್ತದೆ. ಜೊತೆಗೆ ರೊಟ್ಟಿ ಕಪ್ಪಗಾಗುತ್ತದೆ. ಎಷ್ಟು ಉಜ್ಜಿದ್ರೂ ಕೆಲವೊಮ್ಮೆ ರೊಟ್ಟಿ ತವಾ ಸ್ವಚ್ಛವಾಗುವುದಿಲ್ಲ. ಸುಲಭವಾಗಿ ರೊಟ್ಟಿ ತವಾ ಸ್ವಚ್ಛಗೊಳಿಸುವ ವಿಧಾನ ಇಲ್ಲಿದೆ.
ತವಾ ಸ್ವಚ್ಛಗೊಳಿಸುವ ಮೊದಲು ತವಾವನ್ನು ಗ್ಯಾಸ್ ಮೇಲಿಟ್ಟು ಗ್ಯಾಸ್ ಹಚ್ಚಿ. ಅದಕ್ಕೆ ನಿಂಬು ರಸವನ್ನು ಹಾಕಿ ಉಜ್ಜಿ. ನಂತ್ರ ಗ್ಯಾಸ್ ಬಂದ್ ಮಾಡಿ, ವಿನೆಗರ್ ಹಾಕಿ ಉಜ್ಜಿ. ಉಪ್ಪನ್ನು ಹಾಕಿ ಕೂಡ ಸ್ವಚ್ಛಗೊಳಿಸಬಹುದು .ಆದ್ರೆ ತವಾ ಬಿಸಿಯಾಗಿರಬೇಕು. ತವಾ ಸ್ವಚ್ಛಗೊಳಿಸಿದ ನಂತ್ರ ಅದನ್ನು ಸ್ವಚ್ಛ ಕಾಟನ್ ಬಟ್ಟೆಯಲ್ಲಿ ಒರಸಿಡಬೇಕು. ಒಮ್ಮೆ ಹೀಗೆ ತವಾ ಸ್ವಚ್ಛಗೊಳಿಸಿದ್ರೆ ಮತ್ತೆ 15 ದಿನ ತವಾ ಸ್ವಚ್ಛಗೊಳಿಸುವ ಅಗತ್ಯವಿಲ್ಲ.
ಇನ್ನು ಪ್ಲಾಸ್ಟಿಕ್ ಡಬ್ಬವನ್ನು ಸ್ವಚ್ಛಗೊಳಿಸಲು ನೀವು ನಿಂಬೆ ರಸ ಬಳಸಬಹುದು. ಪ್ಲಾಸ್ಟಿಕ್ ಡಬ್ಬದಿಂದ ವಾಸನೆ ಬರ್ತಿದ್ದರೆ ಡಬ್ಬಕ್ಕೆ ನಿಂಬೆ ರಸ ಹಾಕಿ ಸ್ವಚ್ಛಗೊಳಿಸಿ.
ಉಕ್ಕಿನ ಅಥವಾ ಕಬ್ಬಿಣದ ಪಾತ್ರೆ ತುಕ್ಕು ಹಿಡಿಯುವುದು ಮಾಮೂಲಿ. ಅದನ್ನು ಅಡುಗೆ ಸೋಡಾ, ಬಿಳಿ ವಿನೆಗರ್ ಬಳಸಿ ಸ್ವಚ್ಛಗೊಳಿಸಬಹುದು.