ದೇಶದೆಲ್ಲೆಡೆ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಇಂದು ಎಲ್ಲೆಡೆ ಅಷ್ಠಮಿ ಆಚರಣೆ ಮಾಡಲಾಗ್ತಿದೆ. ನವಮಿ ನಂತ್ರ ವಿಜಯ ದಶಮಿ ಆಚರಣೆ ನಡೆಯುತ್ತದೆ. ದೇಶದ ಬೇರೆ ಬೇರೆ ಭಾಗಗಳಲ್ಲಿ ದಶಮಿ ಆಚರಣೆ ಭಿನ್ನವಾಗಿರುತ್ತದೆ. ಆದ್ರೆ ವರ್ಷವಿಡಿ ಸುಖ-ಸಮೃದ್ಧಿ ಬಯಸುವ ಜನರು ದಶಮಿ ದಿನ ಕೆಲವೊಂದು ಕೆಲಸವನ್ನು ಅಗತ್ಯವಾಗಿ ಮಾಡಬೇಕು.
ದಶಮಿಯ ದಿನ ನೀಲಕಂಠ ಪಕ್ಷಿಯ ನೋಡಬೇಕು. ನೀಲಕಂಠ ಪಕ್ಷಿ ಕಣ್ಣಿಗೆ ಬಿದ್ದರೆ ಶುಭವೆಂದು ನಂಬಲಾಗಿದೆ. ಜೀವನಪೂರ್ತಿ ಸಂತೋಷ ಪ್ರಾಪ್ತಿಯಾಗುತ್ತದೆ.
ದಸರಾ ದಿನ ದುರ್ಗಾ ದೇವಿಯ ಪಾದಗಳಲ್ಲಿ ಕರವಸ್ತ್ರಗಳಿಂದ ಸ್ವಚ್ಛಗೊಳಿಸಬೇಕು. ಕರವಸ್ತ್ರ ಕೆಂಪು ಬಣ್ಣದಾಗಿದ್ದರೆ ಒಳ್ಳೆಯದು. ನಂತ್ರ ಆ ವಸ್ತ್ರವನ್ನು ಕಪಾಟಿನಲ್ಲಿಡಬೇಡು. ಇದು ಆರ್ಥಿಕ ಸಮೃದ್ಧಿಗೆ ಕಾರಣವಾಗುತ್ತದೆ.
ದಸರಾ ದಿನದಂದು ಶಮಿ ಮರವನ್ನು ಪೂಜಿಸಿ. ಇದು ಮನೆ ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಶಮಿ ಮರವನ್ನು ನೆಡಲು ದಸರಾ ದಿನವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ದಸರಾ ದಿನ ಸ್ವಲ್ಪ ದೂರ ಪ್ರಯಾಣ ಬೆಳೆಸಬೇಕು. ಇದು ವರ್ಷ ಪೂರ್ತಿ ಪ್ರಯಾಣ ಸುಖಕರವಾಗಿರುವಂತೆ ಮಾಡುತ್ತದೆ.