ಉತ್ತಮ ನಿದ್ರೆ ಆರೋಗ್ಯಕ್ಕೆ ಒಳ್ಳೆಯದು. ರಾತ್ರಿ 8-9 ಗಂಟೆಗಳ ಕಾಲ ಸರಿಯಾಗಿ ನಿದ್ರೆ ಮಾಡಬೇಕು. ರಾತ್ರಿ ಮಲಗುವ ಮೊದಲು ಮಾಡುವ ಕೆಲಸ ನಿದ್ರಾಹೀನತೆಗೆ ಕಾರಣವಾಗುತ್ತದೆ. ಹಾಗಾಗಿ ರಾತ್ರಿ ಮಲಗುವ ಮೊದಲು ಕೆಲವೊಂದು ಆಹಾರವನ್ನು ಸೇವಿಸಬಾರದು.
ಚಾಕೊಲೇಟ್ ನಲ್ಲಿ ಕೆಫೀನ್ ಮತ್ತು ಸಕ್ಕರೆಯಿರುತ್ತದೆ. ಚಾಕೊಲೇಟ್ ಹಾರ್ಮೋನುಗಳನ್ನು ಉತ್ತೇಜಿಸುತ್ತದೆ. ಅದು ರಾತ್ರಿ ನಿದ್ರೆ ಬರದಿರಲು ಕಾರಣವಾಗುತ್ತದೆ. ಹಾಗಾಗಿ ಮಲಗುವ ಮೊದಲು ಚಾಕೊಲೇಟ್‌ನಿಂದ ದೂರವಿರುವುದು ಒಳ್ಳೆಯದು.
ಧಾನ್ಯಗಳಿಂದ ತಯಾರಿಸಿದ ಆಹಾರವನ್ನು ರಾತ್ರಿ ಸೇವನೆ ಮಾಡಬಾರದು. ಮಾರುಕಟ್ಟೆಯಲ್ಲಿ ಸಿಗುವ ಹೆಚ್ಚಿನ ಆಹಾರದಲ್ಲಿ ಸಕ್ಕರೆ ಪ್ರಮಾಣವಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುತ್ತದೆ. ಹಾಗಾಗಿ ರಾತ್ರಿ ಮಲಗುವ ಮೊದಲು ಇದನ್ನು ಸೇವನೆ ಮಾಡಬಾರದು.
ಹೆಚ್ಚಿನ ಜನರು ಬೆಳ್ಳುಳ್ಳಿ ಇಲ್ಲದೆ ಆಹಾರವನ್ನು ತಿನ್ನುವುದಿಲ್ಲ. ಬೆಳ್ಳುಳ್ಳಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಬೆಳ್ಳುಳ್ಳಿಯನ್ನು ರಾತ್ರಿಯಲ್ಲಿ ಸೇವಿಸಿದರೆ ಅದು ನಿದ್ರೆಯನ್ನು ದೂರ ಮಾಡುತ್ತದೆ. ರಾತ್ರಿ ಉತ್ತಮ ನಿದ್ರೆ ಬಯಸುವವರು ಕಡಿಮೆ ಬೆಳ್ಳುಳ್ಳಿ ಸೇವನೆ ಮಾಡಬೇಕು.
ಪಾಸ್ತಾ, ಮೊಮೊಸ್ ಆಹಾರವನ್ನು ರಾತ್ರಿ ಸೇವಿಸಬಾರದು. ರಾತ್ರಿಯಲ್ಲಿ ಇದು ಜೀರ್ಣವಾಗುವುದು ಕಷ್ಟ. ಇದು ನಿದ್ರಾಹೀನತೆಗೆ ಕಾರಣವಾಗುತ್ತದೆ. ಎಣ್ಣೆಯಲ್ಲಿ ಕರಿದ ಆಹಾರವನ್ನು ಎಂದೂ ಸೇವಿಸಬೇಡಿ.