‘ಯೂನಿಯನ್ ಆಫ್ ಸ್ಟೇಟ್ಸ್’ ಅಭಿಯಾನದ ಮೂಲಕ ಪ್ರತ್ಯೇಕತಾವಾದವನ್ನು ಪ್ರತಿಪಾದಿಸಿದ ನಂತರ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಈಗ ‘ಜೈ ಹಿಂದ್’ ವಿರುದ್ಧವೂ ತಿರುಗಿ ಬಿದ್ದಿದೆ.
ರಾಜ್ಯಪಾಲರ ಭಾಷಣದಿಂದ ಜೈ ಹಿಂದ್ ತೆಗೆದುಹಾಕಿರುವ ಕಾರಣ ತಮಿಳುನಾಡು ಈಗ ತಲೆ ಎತ್ತಿ ಎತ್ತರಕ್ಕೆ ನಿಂತಿದೆ ಎಂದು ಡಿಎಂಕೆ ಮಿತ್ರ ಪಕ್ಷ ಕೊಂಗನಾಡು ದೇಸಿಯ ಮಕ್ಕಳ್ ಕಚ್ಚಿಯ(ಕೆಡಿಎಂಕೆ) ಮುಖ್ಯಸ್ಥರು ವಿಧಾನಸಭೆಯಲ್ಲಿ ಹೇಳಿದ್ದಾರೆ.
ಮೇ 7 ರಂದು ಹೊಸ ಡಿಎಂಕೆ ಸರ್ಕಾರ ಪ್ರಮಾಣವಚನ ಸ್ವೀಕರಿಸಿದ ನಂತರ, ರಾಜ್ಯಪಾಲರ ಭಾಷಣದೊಂದಿಗೆ ವಿಧಾನಸಭೆ ಅಧಿವೇಶನ ಪ್ರಾರಂಭವಾಯಿತು. ಭಾಷಣದಲ್ಲಿ ಹಿಂದಿನ ವರ್ಷಗಳ ರೀತಿಯಲ್ಲಿ ‘ಜೈ ಹಿಂದ್’ ಘೋಷಣೆ ಮಾಡಲಿಲ್ಲ. ರಾಜ್ಯಪಾಲರ ಭಾಷಣದ ಕೊನೆಯಲ್ಲಿ ಜೈಹಿಂದ್ ಕಾಣೆಯಾಗಿದೆ.
ಅಧಿವೇಶನದಲ್ಲಿ ಶಾಸಕರಿಗೆ ಮಾತನಾಡಲು ಅವಕಾಶ ನೀಡಿದಾಗ, ತಿರುಚೆಂಗೋಡ್ ಶಾಸಕ ಮತ್ತು ಕೆಡಿಎಂಕೆ ಮುಖ್ಯಸ್ಥ ಈಶ್ವರನ್ ಅವರು, ರಾಜ್ಯಪಾಲರ ಭಾಷಣ ಕೇಳಿದ ನಂತರ, ತಮಿಳುನಾಡು ತಲೆ ಎತ್ತಿಕೊಂಡು ನಿಂತಿದೆ ಎಂದು ನಾನು ಅರಿತುಕೊಂಡೆ. ಕಳೆದ ವರ್ಷ ರಾಜ್ಯಪಾಲರ ಭಾಷಣಕ್ಕಿಂತ ಭಿನ್ನವಾಗಿ, ಈ ವರ್ಷ ತಮ್ಮ ಭಾಷಣವನ್ನು ಮುಕ್ತಾಯಗೊಳಿಸುವಾಗ ʼಜೈ ಹಿಂದ್ʼ ಪದವನ್ನು ರಾಜ್ಯಪಾಲರು ಹೇಳಲಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯಪಾಲರ ಭಾಷಣವನ್ನು ಸಾಮಾನ್ಯವಾಗಿ ಸರ್ಕಾರ ಸಿದ್ಧಪಡಿಸುತ್ತದೆ. ಜೈ ಹಿಂದ್ ತೆಗೆದುಹಾಕಿದ್ದನ್ನು ಡಿಎಂಕೆ ಸರ್ಕಾರದ ಸಾಧನೆ ಎಂದು ಈಶ್ವರನ್ ಹೆಮ್ಮೆಪಟ್ಟಿದ್ದರು. ವ್ಯಾಪಕ ಆಕ್ರೋಶದ ನಂತರ ಅವರು, ತಮ್ಮ ಅಭಿಪ್ರಾಯಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಎರಡು ಭಾಷಾ ನೀತಿಯನ್ನು ಮುಂದುವರಿಸುವುದಾಗಿ ಡಿಎಂಕೆ ಸರ್ಕಾರ ಭರವಸೆ ನೀಡಿರುವುದರಿಂದ ಹಿಂದಿ ಪದವನ್ನು ತೆಗೆದುಹಾಕಿರುವುದನ್ನು ಗಮನ ಸೆಳೆಯಲು ಹೀಗೆ ಹೇಳಿದ್ದಾಗಿ ತಿಳಿಸಿದ್ದಾರೆ.
ಆದಾಗ್ಯೂ, ‘ಯೂನಿಯನ್ ಆಫ್ ಸ್ಟೇಟ್ಸ್’ ಅಭಿಯಾನದ ಮೂಲಕ ಪ್ರತ್ಯೇಕತಾವಾದಿ ಕಾರ್ಯಸೂಚಿಯೊಂದಿಗೆ ಸೇರಿಕೊಂಡು, ಜೈ ಹಿಂದ್ ಗೆ ವಿರೋಧ ಮಾಡಿದ್ದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತ್ಯೇಕತಾವಾದಿ ಮತ್ತು ದೇಶದ್ರೋಹಿ ಆರೋಪಗಳು ಕೂಡ ವ್ಯಕ್ತವಾಗಿವೆ.
ಬಿಜೆಪಿ ಅಥವಾ ಕಾಂಗ್ರೆಸ್ನಲ್ಲಿ ಪರಾವಲಂಬಿಗಳಾಗಿ ಬದುಕಲು ಜೈ ಹಿಂದ್ ಎಂದು ಹೇಳುತ್ತಾರೆ. ಏಕೆಂದರೆ, ಅದೇ ಅವರ ಟಿಕೆಟ್ ಆಗಿದೆ. ಕುತೂಹಲಕಾರಿ ಸಂಗತಿ ಎಂದರೆ, ಯಾವುದೇ ಬಿಜೆಪಿ ಅಥವಾ ರಾಷ್ಟ್ರೀಯ ಪರವಾದ ಎಡಿಎಂಕೆ ಶಾಸಕರು ಫ್ಲೋರ್ ನಲ್ಲಿ ಈಶ್ವರನ್ ಅವರ ಹೇಳಿಕೆಗೆ ಆಕ್ಷೇಪಿಸಲಿಲ್ಲ.
ವಿಧಾನಸಭಾ ದಾಖಲೆಗಳಿಂದ ತೆಗೆದುಹಾಕಲು ಪ್ರಯತ್ನಿಸುತ್ತಿಲ್ಲ. ಇದರ ಮಧ್ಯೆ ತಮಿಳುನಾಡು ಕಾಂಗ್ರೆಸ್, ಜೈಹಿಂದ್(ತಮಿಳಿನಲ್ಲಿ) #ProudToSayJaiHind” ಎಂದು ಟ್ವೀಟ್ ಮಾಡಿದ್ದು, ಜೊತೆಗೆ ಇಂದಿರಾಗಾಂಧಿಯವರ ವಿಡಿಯೊ ಕ್ಲಿಪ್ ನೊಂದಿಗೆ ಜೈ ಹಿಂದ್ ಎಂದು ಹೇಳಿದೆ.
ಅಚ್ಚರಿಯ ಸಂಗತಿಯೆಂದರೆ ಬಿಜೆಪಿ ಮಿತ್ರಪಕ್ಷ ಎಐಎಡಿಎಂಕೆ ಕೂಡಾ ಆಡಳಿತ ಪಕ್ಷದ ನಿಲುವಿನ ಕುರಿತು ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ.