ದಿವಗಂತ ಜಯಲಲಿತಾ ಪುತ್ಥಳಿ ನಿರ್ವಹಣೆ ಜವಾಬ್ದಾರಿ ನೀಡುವಂತೆ ಕೋರಿ ವಿರೋಧ ಪಕ್ಷ ಎಐಎಡಿಎಂಕೆ ಸಲ್ಲಿಸಿದ್ದ ಅರ್ಜಿಯನ್ನು ತಮಿಳುನಾಡು ಸರ್ಕಾರ ತಳ್ಳಿ ಹಾಕಿದೆ. ಸರ್ಕಾರದ ಅಧೀನದಲ್ಲಿರುವ ಪುತ್ಥಳಿಗಳನ್ನು ಖಾಸಗಿ ಸಂಸ್ಥೆಗಳಿಗೆ ಅಥವಾ ಸಂಘಗಳಿಗೆ ನೀಡುವ ಪದ್ಧತಿ ನಮ್ಮಲ್ಲಿಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.
ಎಐಎಡಿಎಂಕೆ ಸಂಯೋಜಕ ಹಾಗೂ ಮಾಜಿ ಸಿಎಂ ಪನ್ನೀರಸೆಲ್ವಂ ತಮಿಳುನಾಡು ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆದು ತಮಿಳುನಾಡು ರಾಜ್ಯ ಉನ್ನತ ಶಿಕ್ಷಣ ಕೌನ್ಸಿಲ್ ಕ್ಯಾಂಪಸ್ನಲ್ಲಿರುವ ಜಯಲಲಿತಾ ಪುತ್ಥಳಿಯ ನಿರ್ವಹಣ ಜವಾಬ್ದಾರಿಯನ್ನು ನಮ್ಮ ಪಕ್ಷಕ್ಕೆ ನೀಡಿ ಎಂದು ಕೇಳಿದ್ದರು.
ಇದಲ್ಲವೇ ಮಾತೃ ವಾತ್ಸಲ್ಯ…! ಮರಿಯನ್ನು ರಕ್ಷಿಸಲು ಮೊಸಳೆಯನ್ನು ತುಳಿದು ಕೊಂದ ತಾಯಿ ಆನೆ
ಈ ವಿಚಾರವಾಗಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಕೆ. ಪೊನ್ಮುಂಡಿ, ಈ ಪ್ರತಿಮೆಯ ನಿರ್ವಹಣೆಯ ಜವಾಬ್ದಾರಿಯನ್ನು ತಮಿಳುನಾಡು ಸರ್ಕಾರವೇ ಮುಂದುವರಿಸಲಿದೆ ಎಂದು ಹೇಳಿದ್ದಾರೆ.
ತಮಿಳುನಾಡು ಲೋಕೋಪಯೋಗಿ ಇಲಾಖೆಯು ಪ್ರಸ್ತುತ ಈ ಪ್ರತಿಮೆ ನಿರ್ವಹಣೆ ಮಾಡುತ್ತಿದೆ. ತಮಿಳುನಾಡಿನಲ್ಲಿ ಪ್ರತಿಮೆ ನಿರ್ವಹಣೆಯ ಜವಾಬ್ದಾರಿಗಳನ್ನು ಮೊದಲಿನಿಂದಲೂ ಲೋಕೋಪಯೋಗಿ ಇಲಾಖೆಯೇ ನೋಡಿಕೊಂಡು ಬಂದಿದೆ. ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳಿಗೆ ಪುಷ್ಪ ನಮನ ಸಲ್ಲಿಸುವ ಮಾಡುತ್ತಿದೆ. ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಪ್ರತಿಮೆಯ ಜವಾಬ್ದಾರಿಯನ್ನೂ ಇದೇ ಇಲಾಖೆ ನೋಡಿಕೊಳ್ಳಲಿದೆ ಎಂದು ಪೊನ್ಮುಂಡಿ ಹೇಳಿದ್ದಾರೆ.