alex Certify ರಾಹುಲ್ ಗಾಂಧಿಯನ್ನ ಹಾಡಿ ಹೊಗಳಿದ ತಮಿಳುನಾಡು ಸಿಎಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಹುಲ್ ಗಾಂಧಿಯನ್ನ ಹಾಡಿ ಹೊಗಳಿದ ತಮಿಳುನಾಡು ಸಿಎಂ

ಬುಧವಾರ ಸಂಸತ್ತಿನಲ್ಲಿ ಮಾಡಿದ ಭಾಷಣಕ್ಕಾಗಿ ರಾಹುಲ್ ಗಾಂಧಿಯವರನ್ನ ಶ್ಲಾಘಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ತಮಿಳರ ದೀರ್ಘಕಾಲದ ವಾದಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಕ್ಕಾಗಿ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ.

ರಾಹುಲ್ ಗಾಂಧಿಯನ್ನ ಆತ್ಮೀಯ ಎಂದು ಕರೆದಿರುವ ಎಂಕೆ ಸ್ಟಾಲಿನ್, ಭಾರತೀಯ ಸಂವಿಧಾನದ ಕಲ್ಪನೆಯನ್ನು ಒತ್ತಿಹೇಳುವ ಭಾಷಣ ಮಾಡಿದ ನಿಮಗೆ ಎಲ್ಲಾ ತಮಿಳರ ಪರವಾಗಿ ನಾನು ಧನ್ಯವಾದ ಅರ್ಪಿಸುತ್ತೇನೆ. ನೀವು ಸಂಸತ್ತಿನಲ್ಲಿ ತಮಿಳರ ದೀರ್ಘಕಾಲದ ವಾದಗಳಿಗೆ ಧ್ವನಿ ನೀಡಿದ್ದೀರಿ. ಇದು ತಮಿಳರ ಸಾಂಸ್ಕೃತಿಕ ಮತ್ತು ಮೂಲ ರಾಜಕೀಯದ ಸ್ವಾಭಿಮಾನವನ್ನು ಎತ್ತಿಹಿಡಿದಿದೆ ಎಂದಿದ್ದಾರೆ.

ರಾಖಿಯ ಬೋಲ್ಡ್‌ ಅವತಾರ ಕಂಡು ಶಾಕ್‌ ಆದ ಅಭಿಮಾನಿಗಳು

ಬುಧವಾರ ಸಂಸತ್ತಿನ್ನಲ್ಲಿ ಭಾಷಣ ಮಾಡಿದ ರಾಹುಲ್ ಗಾಂಧಿ, ಆಡಳಿತಾರೂಢ ಬಿಜೆಪಿಯು 1947ರಲ್ಲಿ ಒಡೆದು ಹಾಕಿದ್ದ ‘ಭಾರತದ ರಾಜ’ ಕಲ್ಪನೆಯನ್ನು ಮರಳಿ ತಂದಿದೆ ಎಂದು ಆರೋಪಿಸಿದರು. ಪ್ರಧಾನಿಯನ್ನ ಗುರಿಯಾಗಿಸಿ ‘ರಾಜನ ಕಲ್ಪನೆ ಮರಳಿ ಬಂದಿದೆ’ ಎಂದಿದ್ದರು.‌ ಸಂವಿಧಾನದಲ್ಲಿ ಭಾರತವನ್ನು ರಾಜ್ಯಗಳ ಒಕ್ಕೂಟ ಎಂದು ವಿವರಿಸಲಾಗಿದೆ ಹೊರತು ರಾಷ್ಟ್ರವಲ್ಲ. ಭಾರತದಲ್ಲಿ ರಾಜ್ಯದ ಜನರನ್ನು ಆಳಲು ಸಾಧ್ಯವಿಲ್ಲ. ವಿವಿಧ ಭಾಷೆ ಮತ್ತು ಸಂಸ್ಕೃತಿಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಭಾರತ ಪಾಲುದಾರಿಕೆಯಾಗಿದೆ, ಸಾಮ್ರಾಜ್ಯವಲ್ಲ. ದಶಕಗಳಿಂದ ಭಾರತವನ್ನು ಆಳಿದ ಏಕೈಕ ಮಾರ್ಗವೆಂದರೆ ಸಂಭಾಷಣೆಗಳು.‌ ಕಾಂಗ್ರೆಸ್ 1947ರಲ್ಲಿ ರಾಜನ ಕಲ್ಪನೆಯನ್ನು ಒಡೆದು ಹಾಕಿತು, ಆದರೆ ಈಗ ಅದು ಮತ್ತೆ ಬಂದಿದೆ, ಕೇಂದ್ರದ ಕೋಲಿನಿಂದ ಭಾರತವನ್ನು ಆಳಬಹುದು ಎಂಬ ದೂರದೃಷ್ಟಿ ಸೃಷ್ಟಿಯಾಗಿದೆ ಎಂದು ಆರೋಪಿಸಿದ ಅವರು, ಸಹಕಾರಿ ಫೆಡರಲಿಸಂಗೆ ಮಹತ್ವ ನೀಡಿ ಎಂದಿದ್ದಾರೆ.

ಭಾರತದ ಎರಡು ದೃಷ್ಟಿಕೋನಗಳಿವೆ. ಒಂದು, ರಾಜ್ಯಗಳ ಒಕ್ಕೂಟದಲ್ಲಿ, ಮಾತುಕತೆ ಮತ್ತು ಸಮಾಲೋಚನೆಯ ಮೂಲಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಇದು ಸಮಾನರ ಪಾಲುದಾರಿಕೆ. ಇನ್ನೊಂದು, ಶಾಹೆನ್‌ಶಾಹ್‌ನ ಆದೇಶದ ಆಳ್ವಿಕೆ. ಇದು 3000 ವರ್ಷಗಳಿಂದಲು ಕೆಲಸ ಮಾಡಿಲ್ಲ. ಬಿಜೆಪಿಯ ದೋಷಪೂರಿತ ದೃಷ್ಟಿ ನಮ್ಮ ದೇಶವನ್ನು ದುರ್ಬಲಗೊಳಿಸಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ‌.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...