
ಟಿಎಂಸಿಯ ಕಾಕೋಲಿ ಘೋಷ್ ದಸ್ತಿದಾರ್ ಲೋಕಸಭೆಯಲ್ಲಿ ಬೆಲೆ ಏರಿಕೆಯ ವಿಷಯವನ್ನು ಪ್ರಸ್ತಾಪಿಸಿದ ಕೂಡಲೇ ಮೊಯಿತ್ರಾ ಅವರು ತಮ್ಮ ದುಬಾರಿ ಬೆಲೆಯ ಲೂಯಿ ವಿಟಾನ್ ಬ್ಯಾಗ್ ಅನ್ನು ಮರೆಮಾಡಿದ ವಿಡಿಯೋ ಸಾಕಷ್ಟು ಸದ್ದು ಮಾಡಿತ್ತು.
ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಯಿತು. ನಕಾರಾತ್ಮಕ ಪ್ರತಿಕ್ರಿಯೆಗಳೆ ಹೆಚ್ಚು ಬಂದಿತ್ತು. ಇದೀಗ, ಟಿಎಂಸಿ ಸಂಸದೆ ಫೋಟೊ ಕೊಲಾಜ್ ಜೊತೆಗೆ ಟ್ರೋಲ್‌ಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಮೊಯಿತ್ರಾ ಅವರು ಫೋಟೋ ಕೊಲಾಜ್ ಅನ್ನು ಹಂಚಿಕೊಂಡಿದ್ದು “2019 ರಿಂದ ಸಂಸತ್ತಿನಲ್ಲಿ ಜೊಲೆವಾಲಾ ಫಕೀರ್. ಜೋಲಾ ಲೇಕೆ ಆಯ್, ಜೋಲಾ ಲೇಕೆ ಚಲ್ ಪಡೆಂಗೆ” ಎಂದು ಬರೆದುಕೊಂಡಿದ್ದಾರೆ.
ಏಳು ಫೋಟೋಗಳ ಕೊಲಾಜ್ ಮಾಡಿದ್ದು, ಎಲ್ಲ ಫೋಟೋಗಳಲ್ಲೂ ಆ ದುಬಾರಿ ಬ್ಯಾಗ್ ಕಾಣಿಸುತ್ತದೆ. ಈ ಟ್ವೀಟ್‌ಗೂ ಸಾಕಷ್ಟು ಪ್ರತಿಕ್ರಿಯೆ ಬಂದಿದೆ. ಟೀಕೆ ಮಾತ್ರ ನಿಂತಿಲ್ಲ. ಅಂದಹಾಗೆ ಈ ಬ್ಯಾಗ್‌ನ ಬೆಲೆ ಬರೋಬ್ಬರಿ ಎರಡು ಲಕ್ಷ ರೂಪಾಯಿ !