ಪಶ್ಚಿಮ ಬಂಗಾಳದ ಉತ್ತರ 24 ಪರಗಣಗಳು ಜಿಲ್ಲೆಯ ಡಂ ಡಂ ಪ್ರದೇಶದಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ರಕ್ಷಾ ಬಂಧನ ಕಾರ್ಯಕ್ರಮ ಆಯೋಜಿಸಿದ್ದರು. ಈ ವೇಳೆ ಅಫ್ಘನ್ ಪ್ರಜೆಗಳಿಗೆ ಮಹಿಳೆಯರು ರಾಖಿ ಕಟ್ಟಿದ್ದಾರೆ.
ರಾಖಿ ಮೇಲೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚಿತ್ರವಿದ್ದು, ’ದಿಲ್ಲಿ ಚಲೋ’ ಎಂದು ಬರೆಯಲಾಗಿದೆ. ಅಫ್ಘನ್ ಪ್ರಜೆಗಳಿಗಲ್ಲದೇ, ಡಂ ಡಂ ಪ್ರದೇಶದಲ್ಲಿ ವಾಸಿಸುತ್ತಿದ್ದ ಇತರ ಮಂದಿಗೂ ಕಾರ್ಯಕರ್ತರು ರಾಖಿ ಕಟ್ಟಿದ್ದಾರೆ.
ʼಹೇರ್ ಕಲರ್ʼ ಬಳಸದೆ ಬಿಳಿ ಕೂದಲಿಗೆ ಹೀಗೆ ಹೇಳಿ ಗುಡ್ ಬೈ
ಇದೇ ವೇಳೆ ಸಿಲಿಗುರಿ ಮಾರುಕಟ್ಟೆಯಲ್ಲಿ ’ದೀದಿ ರಾಖಿ’ಗಳು ಭಾರೀ ಸದ್ದು ಮಾಡುತ್ತಿದ್ದು, ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ’ದೀದಿ’ ಮಮತಾ ಬ್ಯಾನರ್ಜಿ ಗೆಲುವನ್ನು ಆಚರಿಸಲಾಗಿದೆ.