ತಾಯಿಯಾದ ತಿಂಗಳಲ್ಲೇ ಕ್ಷೇತ್ರದ ಕರ್ತವ್ಯಕ್ಕೆ ಮರಳಿದ ನುಸ್ರತ್ ಜಹಾನ್ 03-10-2021 7:02AM IST / No Comments / Posted In: Featured News, Live News, Entertainment ತಾಯಿಯಾದ ಒಂದೇ ತಿಂಗಳಲ್ಲಿ ಮರಳಿ ಕರ್ತವ್ಯಕ್ಕೆ ಬರಲು ನಿರ್ಧರಿಸಿದ ಪಶ್ಚಿಮ ಬಂಗಾಳದ ಸಂಸದೆ ನುಸ್ರತ್ ಜಹಾನ್, ಇದಕ್ಕಾಗಿ ಗಾಂಧಿ ಜಯಂತಿಯ ಸಂದರ್ಭ ಆಯ್ದುಕೊಂಡಿದ್ದಾರೆ. ಮನೆಯಲ್ಲೇ ಕುಳಿತು ಹಣ ಗಳಿಸಲು SBI ನೀಡ್ತಿದೆ ಭರ್ಜರಿ ಅವಕಾಶ ತಾವು ಪ್ರತಿನಿಧಿಸುವ ಹಿಂಗಾಲ್‌ಗಂಜ್ ಲೋಕಸಭಾ ಕ್ಷೇತ್ರದಲ್ಲಿರುವ ಬಶೀರ್‌ಹಾತ್‌ನ ಹಿಂಗಾಲ್‌ಗಂಜ್‌ಗೆ ಭೇಟಿ ನೀಡಿದ ನುಸ್ರತ್, ಕಾಲೇಜೊಂದರಲ್ಲಿ ಆಯೋಜಿಸಲಾಗಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿದ್ದರು. ಮಗುವಿಗೆ ಜನ್ಮವಿತ್ತ ತಿಂಗಳಾಗುತ್ತಲೇ ಕೆಲಸಕ್ಕೆ ಮರಳಿದ ನುಸ್ರತ್ ತಮ್ಮ ಮುಂಬರುವ ಚಿತ್ರದ ಶೂಟಿಂಗ್ ಕೆಲಸಕ್ಕೂ ಹಾಜರಾಗುತ್ತಿದ್ದಾರೆ. ಡಿ.ಕೆ. ರವಿ ದಕ್ಷ, ಆದರೆ ಪ್ರಚಾರ ಪ್ರಿಯ, ಏಕಮುಖ ಪ್ರೀತಿ ಅಪಾಯಕಾರಿ: ‘ನಗ್ನ ಸತ್ಯ’ ಬಿಡುಗಡೆ ಮಾಡಿದ ಸಿದ್ಧರಾಮಯ್ಯ “ಪ್ರಯಾಣಿಸಲು ನನ್ನ ವೈದ್ಯರು ನನಗೆ ಇನ್ನೂ ಅನುಮತಿ ನೀಡಿಲ್ಲ. ಆದರೆ ನಾನು ಹಾಸಿಗೆಯಿಂದ ಮೇಲೇಳಬಹುದಾಗಿದ್ದು, ನನ್ನ ಕ್ಷೇತ್ರದಲ್ಲೆಲ್ಲಾ ಸಂಚರಿಸುತ್ತಿದ್ದೇನೆ. ಇಲ್ಲಿಗೆ ಬಂದು ಆರು ತಿಂಗಳು ಕಳೆದಿವೆ. ಈ ಜನರು ಸಹ ನನ್ನ ಕುಟುಂಬ. ನನಗೆ ಅವರೆಡೆ ಜವಾಬ್ದಾರಿಗಳಿವೆ. ನಾನು ಬರಲೇಬೇಕಿತ್ತು. ಇಚ್ಛಾಶಕ್ತಿ ಇರುವ ಕಾರಣ ನನ್ನ ದೇಹ 100 ಪ್ರತಿಶತ ಫಿಟ್ ಇಲ್ಲದೇ ಇದ್ದರೂ ಬಂದಿದ್ದೇನೆ. ಬಹುಶಃ ನಾನು ಮನೆಗೆ ಮರಳಿದ ಮೇಲೆ ಹುಶಾರು ತಪ್ಪಬಹುದು” ಎಂದು ನುಸ್ರತ್ ತಿಳಿಸಿದ್ದಾರೆ.