ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಟಿಎಂಸಿ ನಾಯಕ ಶಾಂತನು ಬ್ಯಾನರ್ಜಿ ಅವರನ್ನು ಬಂಧಿಸಿದ್ದಾರೆ.
ಸತತ 7 ಗಂಟೆಗಳ ವಿಚಾರಣೆಯ ನಂತರ ಇಡಿ ಅಧಿಕಾರಿಗಳು ಶಾಂತನು ಅವರನ್ನು ಬಂಧಿಸಿದ್ದಾರೆ. 7 ಗಂಟೆಗಳ ನಿರಂತರ ವಿಚಾರಣೆಯ ವೇಳೆ ಶಾಂತನು ಅವರ ಹೇಳಿಕೆಯಲ್ಲಿ ಹಲವಾರು ವ್ಯತ್ಯಾಸ ಕಂಡುಬಂದ ಹಿನ್ನಲೆಯಲ್ಲಿ ಅವರನ್ನು ಬಂಧಿಸಲಾಗಿದೆ.
ಇಡಿ ಯ ಕೋಲ್ಕತ್ತಾ ಕಚೇರಿಯು ಶಾಂತನು ಬಂಧನದ ಬಗ್ಗೆ ದೆಹಲಿಯ ಪ್ರಧಾನ ಕಚೇರಿ ಸಂಪರ್ಕಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಮೂಲಗಳ ಪ್ರಕಾರ, ಶಾಂತನು ಅವರ ಮನೆಯಲ್ಲಿ 300 ಶಿಕ್ಷಕರ ಅಭ್ಯರ್ಥಿಗಳ ಪಟ್ಟಿ ಪತ್ತೆಯಾಗಿದ್ದು, ಈ ಸಂಬಂಧ ಅವರನ್ನು ಪ್ರಶ್ನಿಸಲಾಗಿದೆ. ಶಾತನು ಹಣದ ವಹಿವಾಟು ನಡೆಸಿದ ಮಾಹಿತಿ ಬಗ್ಗೆಯೂ ಕೇಳಲಾಗಿದೆ,
ಬಲಗಢ್‌ನ ಮತ್ತೊಬ್ಬ ತೃಣಮೂಲ ಯುವ ನಾಯಕ ಕುಂತಲ್ ಘೋಷ್ ಬಂಧನದ ನಂತರ ಶಾಂತನು ಬಂಧನವಾಗಿದೆ. ಕುಂತಲ್ ಮತ್ತು ಶಾಂತನು 2014 ರಿಂದ ನೇಮಕಾತಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ.