ಫಸ್ಟ್ ರಾಂಕ್ ರಾಜು ಖ್ಯಾತಿಯ ಗುರುನಂದನ್ ಅಭಿನಯದ ʼರಾಜು ಜೇಮ್ಸ್ ಬಾಂಡ್ʼ ಚಿತ್ರದ ಟೈಟಲ್ ಟ್ರ್ಯಾಕ್ ಇಂದು ಯೂಟ್ಯೂಬ್ನಲ್ಲಿ ರಿಲೀಸ್ ಆಗಿದೆ.
ಈ ಹಾಡಿಗೆ ಚಂದನ್ ಶೆಟ್ಟಿ ಮತ್ತು ಸಾನ್ವಿ ಶೆಟ್ಟಿ ಧ್ವನಿಯಾಗಿದ್ದು, ಜೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ಜ್ಯೋತಿ ವ್ಯಾಸರಾಜ್ ಅವರ ಸಾಹಿತ್ಯವಿದೆ.
ದೀಪಕ್ ಮಧುವನಹಳ್ಳಿ ನಿರ್ದೇಶನದ ಈ ಚಿತ್ರವನ್ನು ಮಂಜುನಾಥ ವಿಶ್ವಕರ್ಮ ಹಾಗೂ ಕಿರಣ್ ಭರ್ತೂರ್ ನಿರ್ಮಾಣ ಮಾಡಿದ್ದು, ಗುರುನಂದನ್ ಅವರಿಗೆ ಜೋಡಿಯಾಗಿ ಮೃದುಲಾ ಅಭಿನಯಿಸಿದ್ದಾರೆ.
ಜಗದೀಶ್ ನಾಡನಳ್ಳಿ ಸಂಭಾಷಣೆ, ಅಮಿತ್ ಜವಾಲ್ಕರ್ ಸಂಕಲನ, ವಿ ಮುರಳಿ ನೃತ್ಯ ನಿರ್ದೇಶನ ಹಾಗೂ ಮನೋಹರ್ ಜೋಶಿ ಛಾಯಾಗ್ರಹಣ ಮಾಸ್ ಮಾಧ ಸಾಹಸ ನಿರ್ದೇಶನವಿದೆ.