ಸಮುದ್ರದ ಅಲೆಗೆ ಅಪ್ಪಳಿಸಿ ಮಗುಚಿಬಿದ್ದ ದೋಣಿ: ಭಯಾನಕ ವಿಡಿಯೋ ವೈರಲ್ 08-02-2023 1:47PM IST / No Comments / Posted In: Latest News, Live News, International ಪ್ರಕೃತಿ ತನ್ನ ಶಕ್ತಿಯನ್ನು ವಿವಿಧ ರೀತಿಯಲ್ಲಿ ಮತ್ತು ವಿವಿಧ ಸ್ಥಳಗಳಲ್ಲಿ ತೋರಿಸುತ್ತದೆ. ಕೆಲವೊಮ್ಮೆ ಇದು ವಿನಾಶಕಾರಿ ಪ್ರವಾಹದ ರೂಪದಲ್ಲಿ ಅಥವಾ ಕೆಲವೊಮ್ಮೆ ತೀವ್ರ ಬರಗಾಲದ ರೂಪದಲ್ಲಿರುತ್ತದೆ. ಇವೆರಡೂ ಪ್ರಕೃತಿಯ ಕ್ರೋಧದ ತೀವ್ರ ಸ್ವರೂಪಗಳು. 2004 ರ ಮಹಾ ಸುನಾಮಿಯನ್ನು ಯಾರು ಮರೆಯಲು ಸಾಧ್ಯ, ಅದು ಭಾರಿ ಪ್ರಮಾಣದಲ್ಲಿ ನಾಶ ಮತ್ತು ಸಾವುನೋವುಗಳನ್ನು ಉಂಟುಮಾಡಿತ್ತು. ಈ ಘಟನೆಗಳಿಂದ ಸಾಗರಗಳು ತುಂಬಾ ಅಪಾಯಕಾರಿ ಎನ್ನುವುದನ್ನು ಕಾಣಬಹುದು. ಅಂಥದ್ದೇ ಇನ್ನೊಂದು ವಿಡಿಯೋ ಈಗ ವೈರಲ್ ಆಗಿದೆ. ಇದರಲ್ಲಿ ಸಮುದ್ರದಲ್ಲಿನ ಅಲೆಗಳು ಎಷ್ಟು ಶಕ್ತಿಯುತವಾಗಿರುತ್ತವೆ ಎಂಬುದನ್ನು ತೋರಿಸುತ್ತದೆ. ಹೆಲಿಕಾಪ್ಟರ್‌ನಿಂದ ಚಿತ್ರೀಕರಿಸಲಾದ ವಿಡಿಯೋವು ಸಾಗರದಲ್ಲಿ ದೋಣಿ ಮತ್ತು ಅದನ್ನು ಸಮೀಪಿಸುತ್ತಿರುವ ಬೃಹತ್ ಅಲೆಯನ್ನು ತೋರಿಸುತ್ತದೆ. ಕೆಲವೇ ಸೆಕೆಂಡುಗಳಲ್ಲಿ ಪ್ರಬಲವಾದ ಅಲೆಯು ದೋಣಿಗೆ ಅಪ್ಪಳಿಸುತ್ತದೆ ಮತ್ತು ಅದು ಉರುಳಿಬಿದ್ದು ನೀರಿನಿಂದ ಆವೃತವಾಗುತ್ತದೆ. ನಂತರ ಅದನ್ನು ಮತ್ತಷ್ಟು ದೂರ ತಳ್ಳಲಾಗುತ್ತದೆ. ಅದಲ್ಲಿರುವ ಜನರು ಏನಾದರೂ ಎಂದು ಇದುವರೆಗೆ ತಿಳಿದಿಲ್ಲ. ವಿಡಿಯೋ ಮಾತ್ರ ಭಯಾನಕವಾಗಿದೆ. 😳😬 pic.twitter.com/n1GiCDbR4l — Best Videos 🎥🔞 (@_BestVideos) February 4, 2023