ಫೆಂಗಲ್ ಚಂಡಮಾರುತದ ಅಬ್ಬರದಿಂದಾಗಿ ತಮಿಳುನಾಡು, ಪುದುಚೆರಿ, ಕೇರಳ ರಾಜ್ಯಗಳು ತತ್ತರಿಸಿದ್ದು, ಹಲವೆಡೆ ಭೀಕರ ಭೂಕುಸಿತ ಸಂಭವಿಸಿವೆ. ಚಂಡಮಾರುತದ ಪರಿಣಾಮ ರಣಭ್ಕರ ಮಳೆಯಾಗುತ್ತಿದ್ದು, ವರೆಗೂ 11 ಜನರು ಸಾವನ್ನಪ್ಪಿದ್ದಾರೆ.
ಈನಡುವೆ ತಿರುವಣ್ಣಾಮಲೈನಲ್ಲಿ ಭೂಕುಸಿತ ಸಂಭವಿಸಿದೆ. ಮತ್ತೊಂದೆಡೆ ಪ್ರವಾಹ ಭೀತಿ ಸೃಷ್ಟಿಯಾಗಿದೆ. ತಿರುವಣ್ಣಾಮಲೈನ ಅಣ್ಣಾಮಲೈಯಾರ್ ಬೆಟ್ಟದ ತಪ್ಪಲಿನಲ್ಲಿ ಭೂಕುಸಿತ ಸಂಭವಿಸಿದ್ದು, 7 ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ನಡುವೆಯೇ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಭೂಕುಸಿತದಿಂದಾಗಿ ವಿ.ಸಿ ನಗರದಲ್ಲಿನ ಹಲವಾರು ಮನೆಗಳಿಗೆ ಹಾನಿಯುಂಟಾಗಿದೆ.’