alex Certify BIG NEWS: ತಿರುಪತಿ ಬೆಟ್ಟದಲ್ಲಿ ಮತ್ತೆ ಚಿರತೆ, ಕರಡಿ ಪ್ರತ್ಯಕ್ಷ; ಕಾಲ್ನಡಿಗೆ ಮಾರ್ಗದಲ್ಲಿ ಬರುವ ಭಕ್ತರಿಗೆ ಜಾಗೃತೆ ವಹಿಸಲು ಸೂಚಿಸಿದ TTD | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ತಿರುಪತಿ ಬೆಟ್ಟದಲ್ಲಿ ಮತ್ತೆ ಚಿರತೆ, ಕರಡಿ ಪ್ರತ್ಯಕ್ಷ; ಕಾಲ್ನಡಿಗೆ ಮಾರ್ಗದಲ್ಲಿ ಬರುವ ಭಕ್ತರಿಗೆ ಜಾಗೃತೆ ವಹಿಸಲು ಸೂಚಿಸಿದ TTD

ತಿರುಪತಿ: ತಿರುಪತಿ-ತಿರುಮಲ ಬೆಟ್ಟದಲ್ಲಿ ಮತ್ತೆ ಚಿರತೆ, ಕರಡಿ ಹಾವಳಿ ಜೋರಾಗಿದ್ದು, ಈ ಬಗ್ಗೆ ಟಿಟಿಡಿ ಆತಂಕ ವ್ಯಕ್ತಪಡಿಸಿದೆ.

2-3 ತಿಂಗಳ ಹಿಂದೆ ಅಲಿಪಿಲಿ ಕಾಲ್ನಡಿಗೆ ಮಾರ್ಗವಾಗಿ ತೆರಳುತ್ತಿದ್ದ ಭಕ್ತರ ಮೇಲೆ ಚಿರತೆ ದಾಳಿ ನಡೆಸಿ ಮಕ್ಕಳನ್ನು ಬಲಿ ಪಡೆದಿತ್ತು. ಈ ಘಟನೆ ಬಳಿಕ ಟಿಟಿಡಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿದ್ದರಲ್ಲದೇ ಕಾಲ್ನಡಿಗೆ ಮಾರ್ಗದಲ್ಲಿ ಸಮಯ ಬದಲಾವಣೆ ಮಾಡಿದ್ದರು.

ಅಲ್ಲದೇ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕೆಲ ಚಿರತೆಗಳನ್ನು ಸೆರೆ ಹಿಡಿದಿತ್ತು. ಇದರಿಂದ ಭಕ್ತರು ಕೊಂಚ ನಿರಾಳರಾಗಿದ್ದರು. ಆದರೆ ಈಗ ಅಲಿಪಿಲಿ ಬೆಟ್ಟದ ಮಾರ್ಗದಲ್ಲಿ ಮತ್ತೆ ಚಿರತೆ ಹಾಗೂ ಕರಡಿ ಪ್ರತ್ಯಕ್ಷವಾಗಿದೆ ಎಂದು ಟಿಟಿಡಿ ಮಾಹಿತಿ ನೀಡಿದೆ.

ಅಕ್ಟೋಬರ್ 24 ಹಾಗೂ 27ರ ನಡುವೆ ಚಿರತೆ ಹಾಗೂ ಕರಡಿ ಚಲನವಲನಗಳು ಸಿಸಿಟಿವಿಯಲ್ಲಿ ದಾಖಲಾಗಿವೆ. ಅಲಿಪಿಲಿ ವಾಕ್ ವೇನಲ್ಲಿರುವ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ದೇವಸ್ಥಾನದಿಂದ ವಾಪಾಸ್ ಆಗುವ ಮಾರ್ಗದಲ್ಲಿ ಚಿರತೆ, ಕರಡಿ ಓಡಾಡುತ್ತಿರುವ ದೃಶ್ಯ ಸೆರೆಯಾಗಿದೆ. ಹಾಗಾಗಿ ವಾರಾಂತ್ಯದಲ್ಲಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರು ಜಾಗೃತೆ ವಹಿಸುವಂತೆ ಸೂಚಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...